HEALTH TIPS

ಇಥಿಯೋಪಿಯಾ | ಜ್ವಾಲಾಮುಖಿ ಸ್ಫೋಟ: ದೆಹಲಿಯಲ್ಲಿ ಹಾರುಬೂದಿ; ವಿಮಾನಗಳ ಹಾರಾಟ ರದ್ದು

ನವದೆಹಲಿ: ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯಿಂದ ಎದ್ದಿರುವ ಹಾರುಬೂದಿಯು ದೆಹಲಿಯನ್ನು ಆವರಿಸಿದೆ. ಇದರ ಪರಿಣಾಮ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದ್ದು, 10 ವಿಮಾನಗಳ ಹಾರಾಟ ವಿಳಂಬವಾಗಿದೆ.

ಏರ್ ಇಂಡಿಯಾ ತನ್ನ 13 ವಿಮಾನಗಳ ಹಾರಾಟವನ್ನು ಸೋಮವಾರ ರದ್ದುಪಡಿಸಿದೆ.

ಇಥಿಯೋಪಿಯಾದ ಹಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟದಿಂದ ಆಗಸದಲ್ಲಿ ಬೂದಿಯ ದಟ್ಟ ಮೋಡ ಆವರಿಸಿದೆ. ಇದು ಭಾರತವನ್ನೂ ಒಳಗೊಂಡು ಪಶ್ಚಿಮದೆಡೆಗೆ ಹರಡುತ್ತಿದೆ.

ಇದರಿಂದಾಗಿ ನಿತ್ಯ 1,500 ವಿಮಾನಗಳ ಹಾರಾಟವನ್ನು ನಿರ್ವಹಿಸುವ ದೇಶದ ಅತಿ ದೊಡ್ಡ ವಿಮಾನ ನಿಲ್ದಾಣದಲ್ಲಿ ತೀವ್ರ ಅಡಚಣೆ ಉಂಟಾಗಿದೆ.

ಆದರೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (DGCA) ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಂದೇಶ ಕಳುಹಿಸಿದ್ದು, ಎಚ್ಚರ ವಹಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜ್ವಾಲಾಮುಖಿಯ ಹಾರುಬೂದಿಯಿಂದಾಗಿ ವಿಮಾನಗಳ ಹಾರಾಟಕ್ಕೆ ಸೂಕ್ತ ಸಮಯ, ಮಾರ್ಗ ಮತ್ತು ಇಂಧನವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries