ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ ಸೆಕ್ಟರಲ್ ಅಧಿಕಾರಿಗಳಿಗೆ ತರಬೇತಿ ತರಗತಿ ಕಾಸರಗೋಡು ಜಿಲ್ಲಾಧಿಕರಿ ಸಭಾಂಗಣದಲ್ಲಿ ಜರುಗಿತು. ಚುನಾವಣಾ ಸಹಾಯಕ ಜಿಲ್ಲಾಧಿಕರಿ ಎ ಎನ್ ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾದ ಎಲ್.ಕೆ. ಸುಬೈರ್, ಜಿ. ಸುರೇಶ್ ಬಾಬು, ಟಿ.ವಿ. ಸಜೀವನ್, ಕೆ.ವಿ. ಬಿಜು ಮತ್ತು ಎಸ್.ಎನ್. ಪ್ರಮೋದ್ ತರಗತಿಗಳನ್ನು ನಡೆಸಿದರು. ಜಿಲ್ಲಾ ಚುನಾವಣಾ ವಿಭಾಗ ತರಬೇತಿ ಆಯೋಜಿಸಿತ್ತು. ಕಾಞಂಗಾಡ್, ಪರಪ್ಪ, ನೀಲೇಶ್ವರ ಬ್ಲಾಕ್‍ಗಳು ಮತ್ತು ಕಾಞಂಗಾಡ್, ನೀಲೇಶ್ವರ ನಗರಸಭಾ ವ್ಯಾಪ್ತಿಯ ಸೆಕ್ಟರಲ್ ಅಧಿಕಾರಿಗಳಿಗೆ ತರಗತಿ ಆಯೋಜಿಸಲಾಗಿತ್ತು.





