HEALTH TIPS

ಮಂಜೇಶ್ವರ ಗ್ರ್ಯಾಂಡ್ ಬೀಚ್ ಉತ್ಸವಕ್ಕೆ ಅದ್ದೂರಿಯ ಚಾಲನೆ : ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರಕೃತಿ ರಮಣೀಯ ತಾಣ

ಮಂಜೇಶ್ವರ: ಮಂಜೇಶ್ವರ ಜನತೆಗೆ ಮತ್ತೊಮ್ಮೆ ಮನರಂಜನೆಯನ್ನು ನೀಡಲು ಎ ಎಚ್ ಎಸ್ ತಂಡದ ಏಳನೇ ಸೀಸನ್ 2025 -26 ಮಂಜೇಶ್ವರ ಬೀಚ್ ಉತ್ಸವಕ್ಕೆ ಸೋಮವಾರ ಅದ್ದೂರಿಯ ಚಾಲನೆ ನೀಡಲಾಗಿದೆ.  

ಕಳೆದ 6 ಸೀಸನ್ ಗಳಲ್ಲೂ ನಷ್ಟದ ಹಾದಿಯಲ್ಲೇ ಸಾಗಿ ಕೈ ಸುಟ್ಟುಕೊಂಡಿರುವ ಈ ತಂಡ ನಾಡಿನ ಅಭಿವೃದ್ಧಿಗಾಗಿ ಈ ಸಲ ಕೂಡಾ ಯಾವುದೇ ಪ್ರವೇಶ ಶುಲ್ಕವಿಲ್ಲದೆ  ಉಚಿತ ಪ್ರವೇಶದೊಂದಿಗೆ ಉತ್ತಮ ಮನರಂಜನೆ ಹಾಗೂ ಆಗಮಿಸುವವರಿಗೆ ವಿಶಿಷ್ಟವಾದ ಅನುಭವಗಳನ್ನು ನೀಡಲು ಮಂಜೇಶ್ವರದ ಬೀಚ್ ನಲ್ಲಿ ವಿವಿಧ ರೀತಿಯ ಚಟುವಟಿಕೆಗಳಿಗೆ ಪ್ರಾಯೋಜಕರಾದ ಸ್ಥಳೀಯ ನಿವಾಸಿಗಳಾದ ಶಾನವಾಸ್, ಶೆರೀಫ್ ಹಾಗೂ ಇರ್ಫಾನ್ ಎಂಬಿವರು ಸಕಲ ಸಿದ್ಧತೆಗಳನ್ನು ಸಜ್ಜುಗೊಳಿಸಿದ್ದಾರೆ. 


ಮಂಜೇಶ್ವರ ಕುಂಡುಕೊಳಕೆ ಸಮುದ್ರ ಕರಾವಳಿ ಪ್ರದೇಶವು ಪ್ರಕೃತಿ ರಮಣೀಯ ತಾಣವಾಗಿದೆ. ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಈ ಪ್ರದೇಶಕ್ಕೆ ಹಿಂದಿನಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದೀಗ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಮಂಜೇಶ್ವರ ಮಾತ್ರವಲ್ಲದೆ ಸುತ್ತುಮುತ್ತಲ ಗ್ರಾಮ ಪಂಚಾಯತ್ ಪ್ರದೇಶಗಳಿಂದಲೂ ಜನರು ನಿರಂತರವಾಗಿ ಆಗಮಿಸುತ್ತಿದ್ದಾರೆ. ಇಲ್ಲಿನ ಕಡಲಕಿನಾರೆಯ ಸೌಂದರ್ಯವು ಅತ್ಯಂತ ಮನೋಹರವಾಗಿದ್ದು, ಅದನ್ನು ವೀಕ್ಷಿಸಲು ಹಾಗೂ ಅಧ್ಯಯನ ನಡೆಸಲು ಪ್ರವಾಸಿಗರು ಬರುತ್ತಿದ್ದಾರೆ. ಇನ್ನೊಂದೆಡೆ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರೆ ಕಾಸರಗೋಡು ಜಿಲ್ಲೆಯ ಶ್ರೇಷ್ಠ ಪ್ರವಾಸಿ ತಾಣವಾಗಿ ಕುಂಡುಕೊಳಕೆ ಬೀಚ್ ಹೊರಹೊಮ್ಮಲಿದೆ.

ಕೊಳಕೆ ಬೀಚ್ ನಲ್ಲಿ ಆರಂಭಿಸಿರುವ ವೈವಿಧ್ಯಮಯವಾದ ಮನರಂಜನೆಯನ್ನೊಳಗೊಂಡ ಬೀಚ್ ಉತ್ಸವಕ್ಕೆ ಅದ್ದೂರಿಯ ಚಾಲನೆ ದೊರಕಿತು. 

ಸ್ಥಳೀಯ ವಾರ್ಡ್ ಸದಸ್ಯೆ ಮುಂತಾನ್ ಸಮೀರ ರಿಬ್ಬನ್ ಕತ್ತರಿಸಿ 2025 - 26ರ ಮಂಜೇಶ್ವರ ಬೀಚ್ ಉತ್ಸವವನ್ನು ಉದ್ಘಾಟಿಸಿದರು. 

ಈ ಸಂದರ್ಭ ಗಣ್ಯರಾದ ಅಶ್ರಫ್ ಬಡಾಜೆ,  ಹರಿಶ್ವಂದ್ರ ಮಂಜೇಶ್ವರ, ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಪಂಚಾಯತು ಸದಸ್ಯೆ ರೇಖಾ, ಉದ್ಯಮಿ ಅಲಿಕುಟ್ಟಿ, ಅನ್ವರ್, ಆಸಿಫ್, ಹಾರಿಸ್, ಪ್ರಾಯೋಜಕರಾದ ಶಾನವಾಸ್ ಆಹ್ಮದ್, ಶೆರೀಫ್ ನ್ಯಾಷನಲ್ ಹಾಗೂ ಇರ್ಫಾನ್ ಉಪಸ್ಥಿತರಿದ್ದರು.

ಡಿಸೆಂಬರ್ 7 ರ ತನಕ  ನಡೆಯಲಿರುವ ಬೀಚ್ ಫೆಸ್ಟಿವಲ್ ಮಂಜೇಶ್ವರ ಹಾಗೂ ಆಸುಪಾಸಿನ ಜನತೆಗೆ  ಉತ್ಸವದ ಸಂಭ್ರಮವಾಗಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಆರಂಭದ ದಿನದಲ್ಲೇ ಬೀಚ್ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿರುವ ಹಿನ್ನೆಲೆಯಲ್ಲಿ  ಊರವರ ಪ್ರೋತ್ಸಾಹಕ್ಕೆ ಬೀಚ್ ಉತ್ಸವದ ಪ್ರಾಯೋಜಕರ ತಂಡ ಅಭಿನಂದನೆ ಸಲ್ಲಿಸಿದೆ.

ಬೀಚ್ ಉತ್ಸವದಲ್ಲಿ ಅಳವಡಿಸಲಾಗಿರುವ ಜಾಂಟ್ ವೀಲ್ ಗೆ ಭಾರೀ ಜನ ಆಕರ್ಶಿತರಾಗುತಿದ್ದಾರೆ.

ಕೊಲಂಬಸ್, ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಮಕ್ಕಳ ಹೆಲಿಕಾಪ್ಟರ್, ಸ್ಕಾರ್ಪಿಯೋ, ಜಂಪಿಂಗ್, ಬೋನ್ಸೇ , ಚಿಕ್ಕ ಮಕ್ಕಳ ಟ್ರೈನ್, ಬೋಟಿಂಗ್ ಸೇರಿದಂತೆ ಕಾಸರಗೋಡು ಮಂಗಳೂರು ನಗರಗಳಲ್ಲಿ ಪ್ರದರ್ಶನ ಕೊಂಡದ್ದಕ್ಕಿಂತ ಭಿನ್ನವಾದ ರೀತಿಯಲ್ಲಿ ವಿವಿಧ ಮನರಂಜನೆಗಳು ಬೀಚ್ ಉತ್ಸವಕ್ಕೆ ಆಗಮಿಸುವ ಜನತೆಯನ್ನು ಕೈ ಮಾಡಿ ಕರೆಯುತ್ತಿದೆ.

ಉತ್ಸವದಲ್ಲಿ ವಿವಿಧ ರೀತಿಯ ಆಹಾರಗಳನ್ನು ಸ್ವಾದಿಸುವ ಅವಕಾಶವೂ ಇದೆ. ಬೀಚ್ ಸುತ್ತಲೂ ಬರ್ಗರ್, ಪಾನಿಪುರಿ, ವಿವಿಧ ಸ್ವಾಧಿಷ್ಟದ ಐಸ್ ಕ್ರೀಂ, ಚಾಟ್ ಇತ್ಯಾದಿ ಧ್ವನಿ ಲಹರಿಯ ಜೊತೆಗೆ ಆಹಾರ ಸೇವನೆಗಿಂತ ಹೆಚ್ಚಿನ ಅನುಭವ ನೀಡುತ್ತವೆ. ಜೊತೆಗೆ, ಗೇಮ್ಸ್ ಸ್ಟಾಲ್‍ಗಳು ಯಾವುದೇ ವಯಸ್ಸಿನವರಿಗೆ ರಂಜನಾತ್ಮಕ ಮತ್ತು ಮೋಜುಭರಿತ ಆನಂದವನ್ನು ನೀಡುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries