ಮುಳ್ಳೇರಿಯ: ಕೇರಳದ ಕೊಚ್ಚಿಯ ಜವಾಹರ್ ಲಾಲ್ ನೆಹರು ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಮೃದಂಗನಾದಂ ಗಿನ್ನೆಸ್ ವಲ್ರ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಜಾನನ ನಾಟ್ಯಾಂಜಲಿ ಮುಳ್ಳೇರಿಯ ಇದರ ಸುಜಾತ ಕಲಾಕ್ಷೇತ್ರ ಅವರ ನಿರ್ದೇಶನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮುಳ್ಳೇರಿಯ ಗಜಾನನ ನಾಟ್ಯಾಂಜಲಿಯಲ್ಲಿ ಜರಗಿತು.
ಗಜಾನನ ನಾಟ್ಯಾಂಜಲಿಯ ನಿರ್ದೇಶಕಿ ಸುಜಾತ ಕಲಾಕ್ಷೇತ್ರ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ದೀಪ ಬೆಳಗಿಸಿ ಉದ್ಘಾಟಿಸಿ ನಾಟ್ಯವು ಕೇವಲ ಸ್ಪರ್ಧೆಗಾಗಿ ಕಲಿಯದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಶರೀರ, ಮಾತು ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಮತ್ತು ವೀಕ್ಷಕರನ್ನು ಒಂದು ಕಲಾತ್ಮಕ ಮತ್ತು ಆಧ್ಯಾತ್ಮಿಕ ಅನುಭವಕ್ಕೆ ಕೊಂಡೊಯ್ಯುತ್ತದೆ. ಆದುದರಿಂದ ಬೆಳೆಯುತ್ತಿರುವ ಪುಟಾಣಿಗಳು ನೃತ್ಯವನ್ನು ಅಭ್ಯಸಿಸುವುದು ಉತ್ತಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ಕಾಸರಗೋಡಿನ ಐ.ನಾರಾಯಣ, ನರ್ತಕಿ ಮಾಯಾ ಕೈಲಾಸ್, ತನುಜಾ ಹಾಗೂ ನೃತ್ಯ ವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.




.jpg)
