ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿದ್ದು, ಹಸಿರು ಪರಿಸರ ಶಿಷ್ಟಾಚಾರ ಸಮಿತಿಯು ತೆಂಗಿನ ಗರಿಗಳ ಹೆಣೆಯುವ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಿತ್ತು.
ಹಸಿರು ಪರಿಸರ ಶಿಷ್ಟಾಚಾರ ಸಂಚಾಲಕಿ ಸಾವಿತ್ರಿ ಟೀಚರ್ ನೇತೃತ್ವ ವಹಿಸಿದ್ದರು. ಸಮಿತಿ ಅಧ್ಯಕ್ಷೆ, ಸ್ವಚ್ಛತಾ ಮಿಷನ್ ಆರ್.ಪಿ. ರಂಜಿನಿ ಕಾರಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ತ್ಯಾಜ್ಯ ಮುಕ್ತ ಸಂಯೋಜಕ ಎಚ್. ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಜನನಿ, ಸಿಡಿಎಸ್ ಅಧ್ಯಕ್ಷೆ ಸವಿತಾ, ಪಿಟಿಎ ಅಧ್ಯಕ್ಷ ಸತೀಶ್ ಕೆ.ಪಿ., ಶಾಲಾ ಪ್ರಾಂಶುಪಾಲೆ ಸುಧಾ ಟೀಚರ್, ಕುರಿಯನ್ ಮಾಸ್ತರ್, ಶಿಕ್ಷಕರು, ಹಸಿರು ಕ್ರಿಯಾಸೇನೆ ಸದಸ್ಯರು, ಕುಟುಂಬಶ್ರೀ ಮತ್ತು ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯ ಶಾಹುಲ್ ಹಮೀದ್ ಸ್ವಾಗತಿಸಿ ವಂದಿಸಿದರು.




.jpg)
.jpg)
