ಕುಂಬಳೆ: ಶಂಪಾ ಪ್ರತಿಷ್ಠಾನ ಬೆಂಗಳೂರು ಆಶ್ರಯದಲ್ಲಿ ಡಾ.ಎಸ್.ಎಲ್.ಭೈರಪ್ಪ ಸಂಸ್ಮರಣೆ, ಕೃತಿಗಳ ಅವಲೋಕನದೊಂದಿಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಪೊಸಡಿಗುಂಪೆ ಕುಡ್ತಡ್ಕದ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನನ್ನ ಗೌಡ ಅಧ್ಯಕ್ಷತೆ ವಹಿಸುವರು. ದ.ಕ. ಕಸಾಪ ಅಧ್ಯಕ್ಷ ಎಂಪಿ.ಶ್ರೀನಾಥ್ ಉದ್ಘಾಟಿಸುವರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ.ಸುರೇಶ್ ಪಾಟೀಲ, ಬಿ.ಎಂ.ರೋಹಿಣಿ, ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿರುವರು. ಕಸಾಪ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಆಶಯ ಭಾಷಣಗೈಯ್ಯುವರು. ಡಾ.ಪ್ರಮೀಳಾ ಮಾಧವ್ ಪ್ರಾಸ್ತಾವಿಕವಾಗಿ ಮಾತನಾಡುವರು. ಶಂ.ಪಾ.ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎಸ್.ಎಲ್.ಮಂಜುನಾಥ್ ಉಪಸ್ಥಿತರಿರುವರು.
ಬಳಿಕ ನಡೆಯುವ ಮೊದಲ ಗೋಷ್ಠಿಯಲ್ಲಿ ಡಾ.ಎಸ್.ಎಲ್.ಭೈರಪ್ಪನವರ ಉತ್ತರ ಕಾಂಡ ಕೃತಿಯ ಬಗ್ಗೆ ಟಿ.ಎ.ಎನ್.ಖಂಡಿಗೆ, ನಿರಾಕರಣ ಕೃತಿಯ ಬಗ್ಗೆ ಡಾ.ವೇದಾವತಿ, ಯಾನದ ಬಗ್ಗೆ ಡಾ.ಸುಭಾಷ್ ಪಟ್ಟಾಜೆ ಉಪನ್ಯಾಸ ನೀಡುವರು. ಎರಡನೇ ಗೋಷ್ಠಿಯಲ್ಲಿ ಗೃಹಭಂಗ ಕೃತಿಯ ಬಗ್ಗೆ ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ಣು, ಸಾರ್ಥದ ಬಗ್ಗೆ ಡಾ.ಶಾಂತರಾಜು, ಡಾ.ಟಿ.ಕೆ.ಕೆಂಪೇಗೌಡ ಅವರು ಆವರಣ ಕೃತಿಯ ಬಗ್ಗೆ ಮಾತನಾಡುವರು. ಅಪರಾಹ್ನ ನಡೆಯಲಿರುವ ಮೂರನೇ ಗೋಷ್ಠಿಯಲ್ಲಿ ದೂರಸರಿದರು ಕೃತಿಯ ಬಗ್ಗೆ ಡಾ.ಮಹಾಲಿಂಗೇಶ್ವರ ಭಟ್ ಎಸ್.ಪಿ., ತಂತು ಕೃತಿಯ ಬಗ್ಗೆ ಡಾ.ಶಾರದಾ ಹಾಗೂ ಪರ್ವದ ಬಗ್ಗೆ ಶಿವಶಂಕರ ಪಿ. ಮಾತನಾಡುವರು. ನಾಲ್ಕನೇ ಗೋಷ್ಠಿಯಲ್ಲಿ ಅಂಚು ಕೃತಿಯ ಬಗ್ಗೆ ಡಾ.ರಾಧಾಕೃಷ್ಣ ಬೆಳ್ಳೂರು, ಸಾಕ್ಷಿ ಕೃತಿಯ ಬಗ್ಗೆ ಕೆ.ರಾಮಚಂದ್ರ, ಮಂದ್ರದ ಬಗ್ಗೆ ಪ್ರೊ.ಲಕ್ಷ್ಮೀ ಕೆ. ಉಪನ್ಯಾಸ ನೀಡುವರು. ಐದನೇ ಗೋಷ್ಠಿಯಲ್ಲಿ ಜಲಪಾತ ಕೃತಿಯ ಬಗ್ಗೆ ಡಾ.ಶ್ರೀಧರ ಏತಡ್ಕ, ನಾಯಿನೆರಳು ಕೃತಿಯ ಬಗ್ಗೆ ಡಾ.ಆಶಾಲತಾ, ನೆಲೆಯ ಬಗ್ಗೆ ಮಾಧುರಿ ದೇಶಪಾಂಡೆ ಉಪನ್ಯಾಸ ನೀಡುವರು. ಬಳಿಕ ಸಂಜೆ 5 ರಿಂದ 6ರ ವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ನ.16 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ನಡೆಯುವ ಮೊದಲ ಗೋಷ್ಠಿಯಲ್ಲಿ ಡಾ.ಅಜಕ್ಕಳ ಗಿರೀಶ ಭಟ್ ಅವರು ಅನ್ವೇಷಣಾ ಕೃತಿಯ ಬಗ್ಗೆ, ಡಾ.ಪ್ರವೀಣ ಪದ್ಯಾಣ ಅವರು ವಂಶವೃಕ್ಷದ ಬಗ್ಗೆ, ಡಾ.ಸೌಮ್ಯಾ ಹೆಚ್. ಅವರು ಮತದಾನ ಕೃತಿಯ ಬಗ್ಗೆ ಉಪನ್ಯಾಸ ನೀಡುವರು. ಏಳನೇ ಗೋಷ್ಠಿಯಲ್ಲಿ ತಬ್ಬಲಿಯು ನೀನಾದೆ ಮಗನೆ ಕೃತಿಯ ಬಗ್ಗೆ ಡಾ.ವರದರಾಜ ಚಂದ್ರಗಿರಿ, ದಾಟು ಕೃತಿಯ ಬಗ್ಗೆ ಪ್ರೊ.ಸುಜಾತಾ ಎಸ್., ಗ್ರಹಣದ ಬಗ್ಗೆ ಡಾ.ಸವಿತಾ ಬಿ. ಮಾತನಾಡುವರು. ಎಂಟನೇ ಗೋಷ್ಠಿಯಲ್ಲಿ ಧರ್ಮಶ್ರೀ ಕೃತಿಯ ಬಗ್ಗೆ ಡಾ.ಶ್ರೀಧರ ಎಚ್.ಬಿ., ಕವಲು ಕೃತಿಯ ಬಗ್ಗೆ ಕವಿತಾ ಕೂಡ್ಲು ಮಾತನಾಡುವರು. ಅಪರಾಹ್ನ 2 ರಿಂದ ಭಿತ್ತಿ ಕೃತಿಯ ಆಂಗ್ಲ ಅವತರಣಿಕೆಯನ್ನು ಪ್ರೊ.ಟಿ.ಜಿ. ನರಸಿಂಹಮೂರ್ತಿ ಹಾಗೂ ಸಿನಿಮಾ ಕಥಾಚಿತ್ರಣವನ್ನು ಕಾಸರಗೋಡು ಚಿನ್ನಾ ಪ್ರಸ್ತುತಪಡಿಸುವರು.
ಅಪರಾಹ್ನ 3 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ವಸಂತಕುಮಾರ ತಾಳ್ತಜೆ ಸಮಾರೋಪ ಭಾಷಣ ಮಾಡುವರು. ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು. ಡಾ.ವಸಂತಕುಮಾರ ಪೆರ್ಲ ಅವಲೋಕನ ನಡೆಸುವರು. ಡಾ.ಮೊಹಮ್ಮದಾಲಿ ಪೆರ್ಲ, ಡಾ.ಯು.ಮಹೇಶ್ವರಿ, ರವಿ ನಾಯ್ಕಾಪು, ಎ.ಆರ್.ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿರುವರು. ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಶಾರದಾ, ವಿಶಾಲಾಕ್ಷ ಪುತ್ರಕಳ ಮೊದಲಾದವರು ಉಪಸ್ಥಿತರಿರುವರು.





