ಕೊಚ್ಚಿ: ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧದ ಲೈಂಗಿಕ ಕಿರುಕುಳ ದೂರಿಗೆ ರಾಹುಲ್ ಅವರ ವಕೀಲ ಅಡ್ವ. ಜಾರ್ಜ್ ಪೂಂತೋಟಂ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಪೋಲೀಸ್ ಠಾಣೆ ಎಂದು ನಮಗೆ ತಿಳಿದಿರುವುದು ಇದೇ ಮೊದಲು. ಮುಖ್ಯಮಂತ್ರಿಯೇ ಡಿಜಿಪಿಯೇ ಎಂಬ ಪ್ರಶ್ನೆ ಉದ್ಬವಿಸಿದೆ ಎಂದು ಜಾರ್ಜ್ ಪೂಂತೋಟಂ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿ ಪೆÇಲೀಸ್ ಠಾಣೆ ಎಂದು ನಮಗೆ ತಿಳಿಯುವುದು ಇದೇ ಮೊದಲು. ಕಳೆದ ಮೂರು ತಿಂಗಳಿನಿಂದ ಸೃಷ್ಟಿಯಾಗುತ್ತಿರುವ ಹೈಪ್ ಇದು. ವಾಟ್ಸಾಪ್ ಚಾಟ್‍ನಲ್ಲಿನ ಸಂಭಾಷಣೆ ರಾಹುಲ್ ಅವರದ್ದೇ ಎಂಬುದಕ್ಕೆ ಪುರಾವೆ ಏನು? ಶಬರಿಮಲೆ ವಿಷಯವನ್ನು ಮುಚ್ಚಿಹಾಕಲು ಸರ್ಕಾರ ನಡೆಸುತ್ತಿರುವ ನಾಟಕ ಇದು ಎಂದು ವಕೀಲ ಜಾರ್ಜ್ ಪೂಂತೋಟಂ ಹೇಳಿದರು. ವಕೀಲರು ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಹೊರಗೆ ಬಂದಿರುವ ಆಡಿಯೋ ರಾಹುಲ್ ಅವರದ್ದೇ ಎಂಬುದಕ್ಕೆ ಯಾವ ಪುರಾವೆಗಳಿವೆ? ಇದು ರಾಜಕೀಯ ನಾಟಕ. ಆಡಿಯೋದಲ್ಲಿರುವ ಹುಡುಗಿ ನಿಲಂಬೂರ್ ಚುನಾವಣೆಯ ಸಮಯದಲ್ಲಿ ಗರ್ಭಪಾತ ಮಾಡಿಸಿಕೊಂಡಿರುವುದಾಗಿ ಹೇಳುತ್ತಾಳೆ.ಈಗ ದೂರು ದಾಖಲಿಸುತ್ತಿದ್ದೀರಾ ಎಂದು ವಕೀಲರು ಕೇಳಿದರು.ರಾಹುಲ್ ವಿರುದ್ಧದ ದೂರಿನಲ್ಲಿ ಏನೋ ಅಸಾಮಾನ್ಯವಿದೆ ಮತ್ತು ತನಿಖಾ ಅಧಿಕಾರಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳಿವೆ ಎಂದು ವಕೀಲರು ಸ್ಪಷ್ಟಪಡಿಸಿದರು.
ಈ ಹಿಂದೆ ಇಲ್ಲದ ದೂರನ್ನು ಈಗ ಹಿತಾಸಕ್ತಿಯ ಹೆಸರಿನಲ್ಲಿ ದಾಖಲಿಸಲಾಗುತ್ತಿದೆ ಮತ್ತು ದೂರಿನ ಸಮಯ ಅಸಾಮಾನ್ಯವಾಗಿದೆ ಎಂದು ಜಾರ್ಜ್ ಪೂಂತೋಟಂ ಹೇಳಿದರು.




