ಬೆತಿಯಾ: ನಿತೀಶ್ ಕುಮಾರ್ ಅವರ ಸರಕಾರದ ನೂತನ ಸಚಿವ ಸಂಪುಟ ಭ್ರಷ್ಟ ಹಾಗೂ ಕ್ರಿಮಿನಲ್ ನಾಯಕರಿಂದ ತುಂಬಿದೆ ಎಂದು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಶುಕ್ರವಾರ ಆರೋಪಿಸಿದ್ದಾರೆ.
ಪಶ್ಚಿಮ ಚಂಪಾರಣ್ ನ ಗಾಂಧಿ ಆಶ್ರಮದಲ್ಲಿ ದಿನವಿಡೀ ಮೌನ ಉಪವಾಸ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಪಕ್ಷ ಜನವರಿ 15ರಂದು 'ಬಿಹಾರ್ ನವ ನಿರ್ಮಾಣ ಸಂಕಲ್ಪ ಯಾತ್ರೆ' ಆರಂಭಿಸಲಿದೆ.
ಈ ಸಂದರ್ಭ ಜನ ಸುರಾಜ್ ಪಕ್ಷದ ಕಾರ್ಯಕರ್ತರು ರಾಜ್ಯದ ಎಲ್ಲಾ ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಸಚಿವ ಸಂಪುಟಕ್ಕೆ ಆಯ್ಕೆಯಾದ ನಾಯಕರನ್ನು ಗಮನಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಬಿಹಾರದ ಕುರಿತು ಕನಿಷ್ಠ ಕಾಳಜಿ ಕೂಡ ಇಲ್ಲ ಎಂಬುದು ತಿಳಿಯುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.




