ಕಾಸರಗೋಡು: ಇಲ್ಲಿಯ ಬಿಇಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವರ್ಣೋತ್ಸವವು ಕಾಸರಗೋಡಿನಲ್ಲಿ ಸೃಜನಶೀಲ ಪ್ರತಿಭೆಗಳ ಸ್ವಯಂ ಅಭಿವ್ಯಕ್ತಿಗೆ ಅವಕಾಶ ಮಾಡಿಕೊಟ್ಟಿತು. ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 400 ಸೃಜನಶೀಲ ಪ್ರತಿಭೆಗಳು ವರ್ಣೋತ್ಸವದಲ್ಲಿ ಪ್ರದರ್ಶನ ನೀಡಿದರು.
ಹಿರಿಯ ಪ್ರಾಥಮಿಕ, ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಕನ್ನಡ ಮತ್ತು ಮಲಯಾಳಂ ವಿಭಾಗಗಳಲ್ಲಿ ಪ್ರಬಂಧ, ಕಥೆ ಬರೆಯುವಿಕೆ, ಕವನ ಬರೆಯುವಿಕೆ, ಭಾಷಣ ಮತ್ತು ಕವಿತೆ ವಾಚನ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ನವೆಂಬರ್ 14 ರಂದು ಮಕ್ಕಳ ಕಲ್ಯಾಣ ಸಮಿತಿ ಆಯೋಜಿಸುವ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆಯಲ್ಲಿ ಭಾಷಣ ಸ್ಪರ್ಧೆಯ ವಿಜೇತರು ಮಕ್ಕಳ ಪ್ರಧಾನಿ, ಮಕ್ಕಳ ಅಧ್ಯಕ್ಷರು ಮತ್ತು ಮಕ್ಕಳ ಭಾಷಣಕಾರರಾಗಿರುತ್ತಾರೆ.
ಜಿಲ್ಲಾ ಮಟ್ಟದ ವರ್ಣೋತ್ಸವವನ್ನು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನನ್ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಖಜಾಂಚಿ ಸಿ.ವಿ. ಗಿರೀಶನ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ರಾಜ್ಯ ಕಾರ್ಯಕಾರಿ ಸದಸ್ಯ ಓ.ಎಂ. ಬಾಲಕೃಷ್ಣನ್ ಮಾಸ್ತರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ. ಕರೀಮ್ ಸ್ವಾಗತಿಸಿ, ಕಾರ್ಯಕಾರಿಣಿ ಕೆ. ಸತೀಶನ್ ವಂದಿಸಿದರು.




.jpg)
.jpg)
