ಮಧೂರು: ಮಧೂರು ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯ ಮೊದಲ ಅಧ್ಯಕ್ಷ ಯು.ಕೆ.ಗಟ್ಟಿ ಅವರ ಹೆಸರಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ ಮನ್ನಿಪ್ಪಾಡಿಯಲ್ಲಿ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಕೂಡ್ಲು ಶಿಲಾನ್ಯಾಸ ನೆರವೇರಿಸಿದರು.
ಗ್ರಾಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ವಾರ್ಡ್ ಸದಸ್ಯ ಉಮೇಶ್ ಗಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗಿರಿಜಾ ಗಟ್ಟಿ, ಕೆ.ಹರ್ಷಿತಾ, ಮುಖಂಡರಾದ ಎನ್.ಸತೀಶ್, ಎಂ.ರಮೇಶ್, ಶ್ರೀಧರ ಗಟ್ಟಿ, ಓಮನಾ ರವಿ, ಲತಾನಂದಗೋಪಾಲನ್, ಜಲಜಾಕ್ಷಿ, ಮನೋಹರ ರಾವ್, ಚಂದ್ರಶೇಖರ್ ಗಟ್ಟಿ, ಗಂಗಾಧರ, ರವಿ ಮಣಿಯಾಣಿ, ಸಿಡಿಎಸ್ ಸದಸ್ಯೆ ಶ್ರೀಲತಾ, ಹಸಿರು ಕ್ರಿಯಾ ಸೇನೆ ಸದಸ್ಯೆ ಉಷಾ ರಾಜನ್, ಪಂಚಾಯಿತಿ ಜೆ.ಎಚ್.ಐ.ವಿ.ರಾಜೀವ್ ಉಪಸ್ಥಿತರಿದ್ದರು. ಉದಯ ಕುಮಾರ್ ಮನ್ನಿಪ್ಪಾಡಿ ಸ್ವಾಗತಿಸಿದರು.




