ಕಾಸರಗೋಡು: ನಗರಸಭೆ ಮತ್ತು ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಆಶ್ರಯ ಫಲಾನುಭವಿಗಳಾದ 14 ಕುಟುಂಬಗಳಿಗೆ ನಿರ್ಮಿಸಲಾದ ಮನೆಗಳ ಕೀಲಿಕೈ ಹಸ್ತಾಂತರ ಸಮಾರಂಭ ನಗರದ ನುಳ್ಳಿಪ್ಪಾಡಿಯಲ್ಲಿ ಜರುಗಿತು. 2015-16 ರಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, 2025ರ ವೇಳೆಗೆ ಮನೆಗಳ ಕಾಂಗಾರಿ ಪೂರ್ಣಗೊಂಡಿದೆ.
ಕಾಸರಗೋಡುನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ ಮತ್ತು ಕುಟುಂಬಶ್ರೀ ಸಿಡಿಎಸ್ ಅವರ ಅವಿರತ ಪ್ರಯತ್ನದಿಂದ ಮನೆಗಳ ನಿರ್ಮಾಣಕಾರ್ಯ ಪೂರ್ತಿಗೊಳಿಸಲಾಗಿದೆ. ನುಳ್ಳಿಪ್ಪಾಡಿಯಲ್ಲಿ 14 ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನುಳ್ಳಿಪ್ಪಾಡಿ ಜೆಪಿ ನಗರದಲ್ಲಿ ನಡೆಯಿತು.
ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅವರು ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ ಅವರಿಗೆ ಮನೆಗಳ ಕೀಲಿಕೈ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕುಟುಂಬಶ್ರೀಯ ಜಿಲ್ಲಾ ಮಿಷನ್ ಸಂಯೋಜಕ ರತೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಹೀರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ರೀತಾ, ರಜನಿ, ಕೌನ್ಸಿಲರ್‍ಗಳಾದ ರಮೇಶ್, ಶಾರದ, ಲಲಿತಾ, ಎಡಿಎಂಸಿ ಕಿಶೋರ್ ಸಿಡಿಎಸ್‍ಸಂಚಾಲಕರಾದ ಶಾಹಿದಾ, ದೇವಯಾನಿ, ಆಶಾ, ಸಿಎಂಎಂ ಬಿನೀಶ್ ಜೋಯ್, ಸಿಒ ಅರ್ಚನಾ, ಲೆಕ್ಕಪರಿಶೋಧಕಿ ಪ್ರಿಯಾ, ಬ್ಲಾಕ್ ಸಂಯೋಜಕಿ ರೆನೀಶ್, ನಗರಸಭಾ ಸದಸ್ಯರು,ಸಿಡಿಎಸ್ ಸದಸ್ಯರು, 14 ಫಲಾನುಭವಿಗಳು, ಕುಟುಂಬಶ್ರೀ ಸದಸ್ಯರು ಉಪಸ್ಥಿತರಿದ್ದರು. ಸಿಡಿಎಸ್ ಉಪಾಧ್ಯಕ್ಷೆ ಶಕೀಲಾ ಮಜೀದ್ ಸ್ವಾಗತಿಸಿದರು. ಸದಸ್ಯ ಕಾರ್ಯದರ್ಶಿ ಪ್ರಸಾದ್ ವಂದಿಸಿದರು. ಸದಸ್ಯ ಕಾರ್ಯದರ್ಶಿ ಪ್ರಸಾದ್ ಅವರು 14 ಫಲಾನುಭವಿಗಳಿಗೆ ತಲಾ 30 ಕೆಜಿ ಅಕ್ಕಿ ವಿತರಿಸಿದರು.




