ಕಾಸರಗೋಡು: ಎಸ್.ಐ.ಆರ್. ಅಧಿಸೂಚನೆ ಸೇರಿದಂತೆ ಚುನಾವಣಾ ಕಾರ್ಯವಿಧಾನಗಳಲ್ಲಿ ಕನ್ನಡ ಭಾಷೆಯನ್ನು ಹೊರಗಿಡುವುದು ಆಕ್ಷೇಪಾರ್ಹ ಮತ್ತು ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ ಇದು ಒಂದು ಸಮಸ್ಯೆಯಾಗಿ ಪರಿಣಮಿಸಲಿರುವುದಾಗಿ ಬಿಜೆಪಿ ಆತಂಕವ್ಯಕ್ತಪಡಿಸಿದೆ.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮಾತನಾಡಿ, ಇದು ಉತ್ತಮ ಶೇಕಡಾವಾರು ಕನ್ನಡ ಮತದಾರರಿಗೆ ತೊಂದರೆಗಳನ್ನುಂಟು ಮಾಡುತ್ತಿದೆ.
ಎಸ್.ಐ.ಆರ್ ಚಟುವಟಿಕೆ ಆರಂಭವಾಗುತ್ತಿದ್ದಂತೆ ಮಲಯಾಳ ಭಾಷೆಯಲ್ಲಿ ಅಧಿಸೂಚನೆಗಳು ಪ್ರಕಟಗೊಳ್ಳಲಾರಂಭಿಸಿದೆ. ಕಾಸರಗೋಡು ಜಿಲ್ಲಾಧಿಕಾರಿಗಳ ಅಧಿಕೃತ ಪುಟದಲ್ಲಿಯೂ ಮಲಯಾಳದಲ್ಲೇ ಸೂಚನೆಗಳಿವೆ. ಭಾಷ ಅಲ್ಪಸಂಕ್ಯಾತರಾದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಮಲಯಾಳದ ಜತೆಗೆ ಕನ್ನಡದಲ್ಲೂ ಪ್ರಕಟಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕಟಣೆಗಳನ್ನು ಮುಂದಕ್ಕೆ ಕನ್ನಡ ಭಾಷೆಯಲ್ಲೂ ಕಡ್ಡಾಯವಾಗಿ ಒದಗಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.




