ಕಾಸರಗೋಡು: ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ ಕರಾವಳಿ ಪ್ರದೇಶದ ಶುಚೀಕರಣ 'ಪುನೀತ ಸಾಗರ ಅಭಿಯಾನ' ಕಾಸರಗೋಡು ಕಡಪ್ಪುರ ಕರಾವಳಿಯಲ್ಲಿ ನಡೆಯಿತು. ಬಿ.ಇ.ಎಮ್ ಹೈಯರ್ ಸೆಕೆಂಡರಿ ಶಾಲೆಯ ಎನ್‍ಸಿಸಿ ವಿದ್ಯಾರ್ಥಿಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.
ಕಾಸರಗೋಡು ಕಡಪ್ಪುರ ಸಮುದ್ರ ಬದಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ಬಾಟಲಿ, ಕಸಕಡ್ಡಿ ಸೇರಿದಂತೆ ವಿವಿಧ ತ್ಯಾಜ್ಯವನ್ನು ಸುಚಿಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಕಡಪ್ಪುರ ಪ್ರದೇಶದ ಧಾರ್ಮಿಕ ಮುಖಂಡರರು, ಸ್ಥಳೀಯ ಪ್ರಮುಖರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಗಣೇಶ್ ಶಾಲಾ ಸಿಬ್ಬಂದಿ ಸಮಿತಿ ಕಾರ್ಯದರ್ಶಿ ವೈ. ಯಶವಂತ್ ಉಪಸ್ಥಿತರಿದ್ದರು.
ಶಾಲಾ ಎನ್.ಸಿ.ಸಿ. ಕೇರ್ ಟೇಕರ್ ಲಿನೋಲ್ಡ್ ಜೋಸೆಫ್, ಶಾಲಾ ಎಸ್.ಎಮ್.ಸಿ. ಚಯರ್ ಮೆನ್ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶುಚೀಕರಣ ಅಭಿಯಾನದಲ್ಲಿ ಪಾಲ್ಗೊಮಡಿದ್ದರು.





