ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ನಾಮಪತ್ರ ಹಿಂದಕ್ಕೆಪಡೆಯಲು ನ. 24ರ ಮಧ್ಯಾಹ್ನ ಮೂರು ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿ ಅಥವಾ ನಾಮನಿರ್ದೇಶಕರು ಅಧಿಕಾರ ನೀಡಿದ ಚುನಾವಣಾ ಏಜೆಂಟರು ಫಾರಂ ಐದರಲ್ಲಿ ತಯಾರಿಸಿದ ನೋಟೀಸ್ ನೀಡುವಮೂಲಕ ನಾಮಪತ್ರ ಹಿಂದಕ್ಕೆಪಡೆಯಬಹುದಾಗಿದೆ. ನಾಮಪತ್ರ ಹಿಂಪಡೆಯುವ ಕಾಲಾವಧಿ ಕಳೆದ ನಂತರ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸುವರು. ಮಲಯಾಳಂ ಅಕ್ಷರಮಾಲೆ ಕ್ರಮದಲ್ಲಿ ಅಭ್ಯರ್ಥಿಯ ಹೆಸರು ಪಟ್ಟಿಯಲ್ಲಿ ಸೇರಿಸಲಾಗುವುದು. ಅಭ್ಯರ್ಥಿಯ ಹೆಸರು, ವಿಳಾಸ, ಮಂಜೂರಾದ ಚಿಹ್ನೆ ಇವು ಈ ಪಟ್ಟಿಯಲ್ಲಿ ಇರಲಿವೆ.
ಜಿಲ್ಲೆಯಲ್ಲಿ ವಿವಿಧ ವಿಭಾಗಗಳಿಗೆ 5475 ನಾಮಪತ್ರಗಳು ಸಲ್ಲಿಕೆಯಾಗಿವೆ. 4219 ಅಭ್ಯರ್ಥಿಗಳು ಇಲ್ಲಿಯವರೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯಿತಿಗೆ 115ನಾಮಪತ್ರ ಸಲ್ಲಿಕೆಯಾಗಿದೆ.
ನೀಲೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ 97, ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ 88, ಕಾಞಂಗಾಡು ಬ್ಲಾಕ್ ಪಂಚಾಯಿತಿಯಲ್ಲಿ 92, ಮಂಜೇಶ್ವರಂ ಬ್ಲಾಕ್ ಪಂಚಾಯಿತಿಯಲ್ಲಿ 86, ಕಾರಡ್ಕ ಬ್ಲಾಕ್ ಪಂಚಾಯಿತಿಯಲ್ಲಿ 74, ಕಾಸರಗೋಡು ಬ್ಲಾಕ್ ಪಂಚಾಯಿತಿಯಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ. ಕಾಞಂಗಾಡು ನಗರಸಭೆಯಲ್ಲಿ 337, ಕಾಸರಗೋಡು ನಗರಸಭೆಯಲ್ಲಿ 219, ಮತ್ತು ನೀಲೇಶ್ವರಂ ನಗರಸಭೆಯಲ್ಲಿ 171 ನಾಮಪತ್ರಗಳು ಸಲ್ಲಿಕೆಯಾಗಿದೆ.




