ಕಾಸರಗೋಡು: ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಮಧೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಮುಂದಿನ ಐದು ವರ್ಷಗಳಲ್ಲಿ ಮಧೂರು ಗ್ರಾಮ ಪಂಚಾಯತಿ ಸ್ಮಾರ್ಟ್ ಮಧೂರು ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದ್ದಾರೆ.
ಮಧೂರು ಗ್ರಾಮ ಪಂಚಾಯತಿ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಧೂರಿನಲ್ಲಿ 50ನೇ ವಾರ್ಷಿಕೋತ್ಸವಕ್ಕೆ ಕಾಲಿಡುತ್ತಿರುವ ಬಿಜೆಪಿಯು ಅಪ್ರತಿಮ ಸಾಧನೆಗಳನ್ನು ಸಾಧಿಸಿದೆ. ಮುಂದಿನ ಐದು ವರ್ಷಗಳಲ್ಲಿ ಮಧೂರು ಗ್ರಾಮ ಪಂಚಾಯತಿಯ ಎಲ್ಲಾ ವಾರ್ಡ್‍ಗಳಲ್ಲೂ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅಶ್ವಿನಿ ತಿಳಿಸಿದರು.
ಬಿಜೆಪಿ ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ ಕುದ್ರೆಪ್ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಗೋಪಾಲನ್, ಮಧೂರು ಪಂಚಾಯತಿ ಪಶ್ಚಿಮ ವಲಯ ಸಮಿತಿಯ ಅಧ್ಯಕ್ಷ ಮಾಧವ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೀಪುಗುರಿ, ಮಧೂರು ಪಂಚಾಯತಿ ಪೂರ್ವ ವಲಯ ಸಮಿತಿಯ ಅಧ್ಯಕ್ಷ ರವಿ ಗಟ್ಟಿ, ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಮುರಳಿ ಮಧೂರು, ಶಶಿಕುಮಾರ್ ಮನ್ನಿಪ್ಪಾಡಿ ಮುಂತಾದವರು ಮಾತನಾಡಿದರು.






