ಕಾಸರಗೋಡು : ರಾಜ್ಯ ಚುನಾವಣಾ ಆಯೋಗವು 2025ರ ಸ್ಥಳೀಯಾಡಳಿತ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ವೆಚ್ಚಗಳ ಮೇಲ್ವಿಚಾರಣೆಗಾಗಿ ಡೆಪ್ಯೂಟಿ ಸೆಕ್ರೆಟರಿ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿಗಳನ್ನು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ವೆಚ್ಚ ವೀಕ್ಷಕರಾಗಿ ನೇಮಿಸಲಾಗಿದೆ.
ನವೆಂಬರ್ 25ರಿಂದ ಮತದಾನ ಮುಗಿಯುವವರೆಗೆ ಆಯಾ ಜಿಲ್ಲೆಗಳಲ್ಲಿ ಇವರು ಕರ್ತವ್ಯ ನಿರ್ವಹಿಸಲಿದ್ದಾರೆ. ವೀಕ್ಷಕರ ವಿವರಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್ ತಿತಿತಿ.seಛಿ.ಞeಡಿಚಿಟಚಿ.gov.iಟಿ ನಲ್ಲೂ ಪ್ರಕಟಿಸಲಾಗಿದೆ.
ಅನಿಲ್ ಕುಮಾರ್ ಟಿ ಅವರನ್ನು ಕಾಸರಗೋಡು, ಮಂಜೇಶ್ವರ ಮಂಡಲ, ಕಾಸರಗೋಡು ಮುನ್ಸಿಪಾಲಿಟಿ, ವಿ ಅಜಯಕುಮಾರ್ ಅವರನ್ನು ಕಾಸರಗೋಡು, ಕಾಂಞಂಗಾಡ್ ನೀಲೇಶ್ವರ ನಗರಸಭೆಗೆ, ಅನಿಲ್ ಕುಮಾರ್ ಎಸ್ ಅವರನ್ನು ಕಾಸರಗೋಡು ಕಾರಡ್ಕ, ಪರಪ್ಪ ಬ್ಲಾಕಿಗೆ ನಿಯೋಜಿಸಲಾಗಿದೆ.
ಸ್ಥಳಿಯಾಡಳಿತ ಚುನಾವಣೆಯ ಸಾಮಾನ್ಯ ಆಡಳಿತ, ಕಾನೂನು-ಸುವ್ಯವಸ್ಥೆ, ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ವ್ಯಾಪಕ ವ್ಯವಸ್ಥೆಗಳ ಮೇಲ್ವಿಚಾರಣೆಗೆ ರಾಜ್ಯ ಚುನಾವಣಾ ಆಯೋಗವು ಐಎಎಸ್ , ಐಎಫ್‍ಎಸ್ ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕ ವೀಕ್ಷಕರಾಗಿ ನಿಯೋಜಿಸಿದೆ. ವೀಕ್ಷಕರ ವಿವರಗಳನ್ನು ಕೆಳಗೆ ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್ www.sec.kerala.gov.in ನಲ್ಲೂ ವಿವರ ಪ್ರಕಟಿಸಲಾಗಿದೆ.
ಕಾಸರಗೋಡು ಜಿಲ್ಲೆಗೆ ಸಾರ್ವಜನಿಕ ವೀಕ್ಷಕರಾಗಿ ಡಾ. ಹರಿಕುಮಾರ್ ಕೆ, ಐಎಎಸ್ ಅವರನ್ನು ನಿಯೋಜಿಸಲಾಗಿದೆ.




