ತುಪ್ಪ ಹೆಚ್ಚು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರು ತುಪ್ಪ ಸೇವಿಸಬಾರದು. ನಿಮಗೆ ಲ್ಯಾಕ್ಟೋಸ್ ಅಲರ್ಜಿ ಇದ್ದರೆ, ನೀವು ಖಂಡಿತವಾಗಿಯೂ ತುಪ್ಪ ಸೇವಿಸಲೇ ಬಾರದು.
ಲ್ಯಾಕ್ಟೋಸ್ ಹಾಲಿನಲ್ಲಿ ಕಂಡುಬರುವ ಒಂದು ವಸ್ತುವಾಗಿದೆ. ನಿಮಗೆ ಲ್ಯಾಕ್ಟೋಸ್ ಅಲರ್ಜಿ ಇದ್ದರೆ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಂತರ ನೀವು ವಿವಿಧ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೆಲವರು ಹೊಟ್ಟೆ ಉಬ್ಬರ ಅನುಭವಿಸಬಹುದು, ಆದರೆ ಇತರರು ಮಲ ವಿಸರ್ಜನೆಯಲ್ಲಿ ತೊಂದರೆ, ಹೊಟ್ಟೆ ನೋವು ಮತ್ತು ವಾಂತಿ ಅನುಭವಿಸಬಹುದು. ಆದ್ದರಿಂದ, ನೀವು ಲ್ಯಾಕ್ಟೋಸ್‍ಗೆ ಅಲರ್ಜಿ ಹೊಂದಿದ್ದರೆ, ತುಪ್ಪದಂತಹ ಡೈರಿ ಉತ್ಪನ್ನಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ.





