ಪಾಲಕ್ಕಾಡ್: ಪಕ್ಷದ ವಿರುದ್ಧ ಸ್ಪರ್ಧಿಸಿದರೆ ಕೊಲ್ಲುವುದಾಗಿ ಸಿಪಿಎಂ ನಾಯಕನೋರ್ವ ಸಿಪಿಎಂ ಮಾಜಿ ಪ್ರದೇಶ ಕಾರ್ಯದರ್ಶಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೋನ್ ಸಂಭಾಷಣೆ ಹೊರಬಿದ್ದಿದೆ.
ಅಗಳಿ ಪಂಚಾಯತ್‍ನ ವಾರ್ಡ್ 18 ರಲ್ಲಿ ಸ್ವತಂತ್ರ ಅಭ್ಯರ್ಥಿ ವಿ.ಆರ್. ರಾಮಕೃಷ್ಣನ್ ಅವರನ್ನು ಸಿಪಿಎಂ ಅಗಳಿ ಸ್ಥಳೀಯ ಕಾರ್ಯದರ್ಶಿ ಎನ್. ಜಮ್ಶೀರ್ ಬೆದರಿಸಿದ್ದಾರೆ ಎಂದು ದೂರು ದಾಖಲಾಗಿದೆ. ರಾಮಕೃಷ್ಣ್ ಅವರಿಗೆ ಕರೆ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕೇಳಿಕೊಂಡರು, ಆದರೆ ರಾಮಕೃಷ್ಣನ್ ಮಣಿಯಲಿಲ್ಲ. ನಂತರ ಅವರು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳದಿದ್ದರೆ ಅವರನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಲಾಯಿತು ಎಂದು ರಾಮಕೃಷ್ಣನ್ ಹೇಳುತ್ತಾರೆ. ವಿ.ಆರ್. ರಾಮಕೃಷ್ಣನ್ 42 ವರ್ಷಗಳಿಂದ ಸಿಪಿಎಂ ಸದಸ್ಯರಾಗಿದ್ದಾರೆ.
ಪ್ರಾಮಾಣಿಕ ರಾಜಕೀಯ ಕೆಲಸ ಮಾಡುವುದು ತಮ್ಮ ಗುರಿ ಎಂದು ರಾಮಕೃಷ್ಣನ್ ಹೇಳಿದ್ದು, ಸಿಪಿಎಂನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.




