ಕಾಸರಗೋಡು: ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯದ ಸಂಸ್ಥಾಪಕ ಡಾ. ವಾಮನ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗೆ ಕೋಲಾರ -ಕರ್ನಾಟಕ ಕನ್ನಡ ರಾಜ್ಯೋತ್ಸವ ಸಾಧಕ ಕನ್ನಡ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿ. ಶಿವಕುಮಾರ್ ಸಾರತ್ಯದ "ಸ್ವರ್ಣಭೂಮಿ ಫೌಂಡೇಶನ್ ವತಿಯಿಂದ ಕಾಸರಗೋಡು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ "ಕೋಲಾರ -ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ "ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಸ್ಥಾಪಕ ಅಧ್ಯಕ್ಷ ಬಿ. ಶಿವಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಕೋಲಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾರಣಪ್ಪ, ಕವಿ, ಸಾಹಿತಿ, ಪ್ರಾಂಶುಪಾಲ ಶರಣಪ್ಪ ಗಬ್ಬೂರು, ಬಿ. ವೆಂಕಟ ರಾಮ, ಇಂಚರ ನಾರಾಯಣ ಸ್ವಾಮಿ, ಪ್ರಾಂಶುಪಾಲ ರಾಜೇಶ್ಚಂದ್ರ ಕೆ. ಪಿ, ಕೆ. ಜಿ. ವೆಂಕಟೇಶ್ ಶಿವಮೊಗ್ಗ, ಡಾ. ರವೀಂದ್ರ ಜೆಪ್ಪು, ಉಮೇಶ್ ರಾವ್ ಕುಂಬಳೆ, ಶ್ರೀಧರ ಶೆಟ್ಟಿ ಮುಟ್ಟಂ, ಅರಿಬೈಲ್ ಗೋಪಾಲ್ ಶೆಟ್ಟಿ, ಡಾ. ಶಾಂತಾ ಪುತ್ತೂರು, ವಿರಾಜ್ ಅಡೂರ್, ಪ್ರದೀಪ್ ಬೇಕಲ್, ಎ. ಆರ್. ಸುಬ್ಬಯ್ಯಕಟ್ಟೆ, ರವಿ ನಾಯ್ಕಾಪು, ರಾಜೇಶ್ ಕೋಟೆಕಣಿ ಉಪಸ್ಥಿತರಿದ್ದರು.





