ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕನ್ನಡ ವಿಭಾಗದಲ್ಲಿ ಚಾಂಪಿಯನ್ಸ್ ಪಟ್ಟ ಪಡೆದ ಎ.ಎಲ್.ಪಿ.ಎಸ್ ನಾರಾಯಣಮಂಗಲ ಶಾಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಉಪಜಿಲ್ಲಾ ಮಟ್ಟದ ಕಲೋತ್ಸವ ಹಾಗೂ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಮಕ್ಕಳ ಗೆಲುವಿಗೆ ಹೆಗಲುಕೊಟ್ಟು ಸಹಕರಿಸಿದ ಅಧ್ಯಾಪಕ ವೃಂದವನ್ನೂ ಅಭಿನಂದಿಸಲಾಯಿತು.
ನಿವೃತ್ತ ಡಿ.ಡಿ.ಇ ಮಹಾಲಿಂಗೇಶ್ವರ ರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಬಾಲಸುಬ್ರಹ್ಮಣ್ಯ ಕೆ. 10 ಕುರ್ಚಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಶಾಲಾ ವ್ಯವಸ್ಥಾಪಕ ಡಾ.ವೆಂಕಟತೇಜಸ್ವಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಶುಭಾಶಂಸನೆಗೈದರು. ಲಲಿತ ಎಂ ಭಟ್, ಅಪರ್ಣ, ಶಾಲಾ ಎಸ್.ಎಂ.ಸಿ ಚಯರ್‍ಮೇನ್ ಐತಪ್ಪ ಕುಲಾಲ್, ಶಾಲಾ ಪಿ.ಟಿ.ಎ ಅಧ್ಯಕ್ಷೆ ಪುಷ್ಪ, ಎಂ.ಪಿ.ಟಿ.ಎ ಅಧ್ಯಕ್ಷೆ ನಂದಿನಿ ಶುಭಹಾರೈಸಿದರು. ಪ್ರೀ ಪ್ರೈಮರಿ ಶಿಕ್ಷಕಿಯರಾದ ಜಯಶ್ರೀ, ಅಶ್ವಿನಿ, ಅಡುಗೆ ವಿಭಾಗದ ಶೋಭಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸ್ಮಿತಾಕುಮಾರಿ ಸ್ವಾಗತಿಸಿ, ಶಿಕ್ಷಕಿ ಮೇಬಲ್ ಡಿಸೋಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆಯರಾದ ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಪ್ರೀತಿಪ್ರಣೀತ ವಂದಿಸಿದರು.




.jpg)
