ಕಾಸರಗೋಡು: ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲಾದ ಶಿಶುಮಹೊತ್ಸವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಪ್ರೀ-ಕೆ.ಜಿ ಯಿಂದ ಎರಡನೇ ತರಗತಿ ವರೆಗಿನ ಮಕ್ಕಳಿಂದ ಪ್ರಕಟಗೊಂಡ ಕಾರ್ಯಕ್ರಮಗಳು ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಕಾಸರಗೋಡಿನ ಪ್ರಮುಖ ನೇತ್ರರೋಗತಜ್ಞ ಡಾ.ವೃಂದ ವಿಶ್ವನಾಥ ಮಹೊತ್ಸವದ ಉದ್ಘಾಟನಾ ಸಮಾರಂಭ ನೆರವೇರಿಸಿದರು. ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸವನ್ನೂ ಬೆಳೆಸುವಲ್ಲಿ ಇಂತಹ ವೇದಿಕೆಗಳು ಅವರ ಸಮಗ್ರ ಬೆಳವಣಿಗೆಗೆ ಅತ್ಯಂತ ಮಹತ್ವದ್ದೆಂದು ಅವರು ತಿಳಿಸಿದರು.
ಶಿಶು ಮಹೊತ್ಸವದ ಅಂಗವಾಗಿ ವಿದ್ಯಾಲಯದಲ್ಲಿ ಹೊಸದಾಗಿ ನಿರ್ಮಿಸಲಾದ ಆಂಜನೇಯ ಅಡಿಟೋರಿಯಂ ನ್ನು ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಉದ್ಘಾಟಿಸಿದರು. ಬಾಲ್ಯದಲ್ಲೇ ಸಂಸ್ಕಾರ ಮತ್ತು ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದೂ, ಮಕ್ಕಳು ತಮ್ಮನ್ನು ತಾವೇ ತೊಡಗಿಸಿಕೊಳ್ಳಲು ಮತ್ತು ಕಲಿಯಲು ಇಂತಹ ವೇದಿಕೆಗಳು ಅತ್ಯಂತ ಮೌಲ್ಯಯುತವೆಂದು ಸ್ವಾಮಿಜಿ ತಿಳಿಸಿದರು.
ಮಕ್ಕಳು ಪ್ರದರ್ಶಿಸುವ ಪ್ರತಿಯೊಂದು ಹೆಜ್ಜೆಯೂ, ಪ್ರತಿಯೊಂದು ಪದವೂ, ಪ್ರತಿಯೊಂದು ನಗುವೂ ಅವರನ್ನು ನಾಳೆಯ ಯಶಸ್ಸಿನತ್ತ ಕೊಂಡೊಯ್ಯಲಿದೆ ಎಂದು ವಿದ್ಯಾಲಯದಪ್ರಾಂಶುಲ ಟಿ.ವಿ.ಸುಕುಮಾರ ಅಭಿಪ್ರಾಯಪಟ್ಟರು.
ಬ್ರಹ್ಮಚಾರಿಣಿ ದಿಶಾಚೈತನ್ಯ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್.ಆರ್, ಸಿಂಧು ಶಶೀಂದ್ರನ್, ಅಕಾಡೆಮಿಕ್ ಸಂಯೋಜಕ ಶೀನಾ ಕೆ.ಪಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.




.jpeg)
