ಕುಂಬಳೆ: ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ(ಎಸ್.ಐ.ಆರ್) ಭಾಗವಾಗಿ ಮತದಾರರಿಗೆ ನಮೂನೆ ರಚನೆಯಲ್ಲಿ ಸಹಾಯ ಕೇಂದ್ರ ಮುನ್ನಡೆಸುತ್ತಿರುವ ಮೊಗ್ರಾಲ್ ರಾಷ್ಟ್ರೀಯ ವೇದಿ ಕಾರ್ಯಕರ್ತರಿಗೆ ಮೊಗ್ರಾಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್. ಸ್ವಯಂಸೇವಕರು ಕೈಜೋಡಿಸಿರುವುದು ಗಮನಾರ್ಹವಾಗಿದೆ. ಅವರು ಕಳೆದ ಎರಡು ವಾರಗಳಿಂದ ಮತದಾರರಲ್ಲಿ ಬಹಳಷ್ಟು ಗೊಂದಲವನ್ನುಂಟುಮಾಡುತ್ತಿರುವ ಎಸ್.ಐ.ಆರ್. ನಮೂನೆ ಫಾರ್ಮ್ ಅನ್ನು ಭರ್ತಿ ಮಾಡಲು ಸಹಾಯ ಮಾಡುತ್ತಿದ್ದಾರೆ.
ಎನ್.ಎಸ್.ಎಸ್. ಸ್ವಯಂಸೇವಕರಿಗೆ ಶಿಕ್ಷಕ ಮುಹಮ್ಮದ್ ಶಿಹಾಬ್ ಕೋಪ್ಪಳ ಅವರು ಫಾರ್ಮ್ ಅನ್ನು ಭರ್ತಿ ಮಾಡುವಲ್ಲಿ ತರಬೇತಿ ನೀಡಿದರು. ಮೊಗ್ರಾಲ್ ರಾಷ್ಟ್ರೀಯ ವೇದಿ ಅಧ್ಯಕ್ಷ ಎ.ಎಂ. ಸಿದ್ದಿಕ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಕುಂಞÂ್ಞ ಟೈಲ್ಸ್ ಸ್ವಾಗತಿಸಿದರು. ವಿಎಚ್‍ಎಸ್‍ಇ ಶಿಕ್ಷಕಿ ನಜುಮುನ್ನಿಸಾಬಿ ಕೆ.ಎನ್, ಶೈಬು, ರಾಷ್ಟ್ರೀಯ ವೇದಿ ಉಪಾಧ್ಯಕ್ಷ ವಿಜಯಕುಮಾರ್, ಮುಖ್ಯೋಪಾಧ್ಯಾಯ ಕರೀಮ್, ಕಾರ್ಯಕಾರಿ ಸದಸ್ಯ ಎಂ.ಎ. ಮೂಸಾ, ಕೆ. ಮೊಹಮ್ಮದ್ ಕುಂಞÂ್ಞ ನಾಂಗಿ, ಅಬ್ದುಲ್ಲ ಮೈಮೂನ ನಗರ, ವಿದ್ಯಾರ್ಥಿಗಳಾದ ಫಿದಾ, ನೌಫಿದಾ, ಶಬಾನಾ, ನುಸಾ, ನಿಸಾ, ಇಂತಿಶಾ, ಬುಶ್ರಾ, ಅಫ್ರಾಜ್, ಮುರ್ತಲಾ, ಮುನವ್ವರಲಿ ಉಪಸ್ಥಿತರಿದ್ದರು.




.jpg)
.jpg)
