ಕಾಸರಗೋಡು: ಪಾಯಿಚ್ಚಾಲು ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೂಡ್ಲಿನ ಹಿರಿಯ ಯಕ್ಷಗಾನ ಕಲಾವಿದ ಪುರುಷೋತ್ತಮ ಆಚಾರ್ಯ ಕೂಡ್ಲು ಇವರಿಗೆ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಸಹಾಯಕ ಅರ್ಚಕ ಮುಟ್ಟತ್ತೋಡಿ ಕೃಷ್ಣಪ್ರಸಾದ ಅಡಿಗ, ಯಕ್ಷಗಾನ ಕಲಾವಿದ ಶೇಣಿ ವೇಣುಗೋಪಾಲ, ನಾಟ್ಯಗುರು ರಂಜಿತ್ ಗೋಳಿಯಡ್ಕ ಇವರು ಶಾಲು, ಹಾರ ಸ್ಮರಣಿಕೆ ಫಲಪುಷ್ಪನೀಡಿ ಗೌರವಿಸಿದರು. ವೇದಿಕೆಯಲ್ಲಿ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ, ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಸಂಚಾಲಕ ಮುರಳೀಧರ ಶೆಟ್ಟಿ ಉಪಸ್ಥಿತರಿದ್ದರು.




