ಕಾಸರಗೋಡು: ಮಧೂರು ಸನಿಹದ ಚೇನಕ್ಕೋಡು ಬದಿಮನೆ ನಿವಾಸಿ, ಪುತ್ತೂರು ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ಶ್ರೀಧರ ನಾಯ್ಕ್(67)ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ರಾತ್ರಿ ಸಾವು ಸಂಭವಿಸಿದೆ. ಇವರು ಸುಂದರಿ ಆರ್ ನಾಯ್ಕ್-ದಿ. ರಾಮಯ್ಯ ನಾಯ್ಕ್ ದಂಪತಿ ಪುತ್ರ. ಮೃತದೇಹ ಚೇನಕ್ಕೋಡಿನ ಅವರ ನಿವಾಸದ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು. ಅವರು ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.





