ಇಂಫಾಲ್: ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಬಂಡುಕೋರರು ಸೇರಿದಂತೆ ಐದು ಮಂದಿಯನ್ನು ಭದ್ರತಾ ಪಡೆಗಳು ಬಂಧಿಸಿವೆ.
ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷಕ್ಕೆ (ಪಿಡಬ್ಲ್ಯುಜಿ) ಸೇರಿದ ಮೂವರನ್ನು ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಯಿತು. ಸಂಘಟನೆಯ ಇನ್ನೊಬ್ಬನನ್ನು ಪಶ್ಚಿಮ ಇಂಫಾಲ್‌ನಲ್ಲಿ ಗುರುವಾರ ಬಂಧಿಸಲಾಯಿತು.
ಇವರು ಅನೇಕ ಸುಲಿಗೆ ಚಟುವಟಿಕೆಗಳಲ್ಲಿ ಹಾಗೂ ನಿಷೇಧಿತ ಸಂಘಟನೆಗಳಿಗೆ ಯುವಕರನ್ನು ನೇಮಿಸುವುದರಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
ಇನ್ನೊಬ್ಬ ವ್ಯಕ್ತಿಯನ್ನು ಗುರುವಾರ ಬಂಧಿಸಿ, ಆತನ ಬಳಿ ಇದ್ದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.




