ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇವರ ನೇತೃತ್ವದಲ್ಲಿ ಮಂಗಳೂರು ಎಜೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಇವರ ಸಹಕಾರದೊಂದಿಗೆ ಬದಿಯಡ್ಕ ಗಣೇಶ ಮಂದಿರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರಗಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಖಂಡ ಸಂಘಚಾಲಕ್ ರಮೇಶ್ ಕಳೇರಿ ಉದ್ಘಾಟಿಸಿ ಮಾತನಾಡಿ, ನಮ್ಮೊಳಗಿನ ಅವಯವಗಳು ಸರಿಯಾಗಿ ತನ್ನ ಕೆಲಸವನ್ನು ಪೂರೈಸಿದರೆ ಮಾತ್ರ ನಾವು ಜೀವಂತವಾಗುಳಿಯಲು ಸಾಧ್ಯ. ಅನೇಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪಲು ಪ್ರಧಾನ ಕಾರಣ ತಪಾಸಣೆ ಮಾಡದಿರುವುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನಿತ್ತು ತಮ್ಮ ಪ್ರಾಯಕ್ಕನುಗುಣವಾಗಿ ತಪಾಸಣೆ ಮಾಡಿಕೊಂಡಿದ್ದರೆ ನಮ್ಮ ಅವಯವಗಳ ಕಾರ್ಯಚಟುವಟಿಕೆಗಳನ್ನು ತಿಳಿಯಬಹುದು. ಈ ನಿಟ್ಟಿನಲ್ಲಿ ಅಗ್ನಿ ಫ್ರೆಂಡ್ಸ್ ಅವರು ಉತ್ತಮವಾದ ಕಾರ್ಯಕ್ಕೆ ಇಳಿದಿರುವುದು ಅಭಿನಂದನೀಯ ಎಂದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದರು. ವಿಶ್ವನಾಥ ಪ್ರಭು ಕರಿಂಬಿಲ, ನರೇಂದ್ರ ಬಿ.ಎನ್, ಬಾಲಕೃಷ್ಣ ಶೆಟ್ಟಿ ಕಡಾರ್, ನಾರಾಯಣ ಪಂಜಿತ್ತಡ್ಕ, ಡಾ.ಶಂಕರ ಪಾಟಾÁಳಿ, ಗಣಪತಿ ಪ್ರಸಾದ್, ಅಶ್ವಿನಿ ಮೊಳೆಯಾರ್, ಜಯಂತಿ ಕುಂಟಿಕಾನ, ನಾರಾಯಣ ಭಟ್ ಮೈರ್ಕಳ ಉಪಸ್ಥಿತರಿದ್ದರು. ಅಗ್ನಿ ಫ್ರೆಂಡ್ ಕ್ಲಬ್‍ನ ಸದಸ್ಯರಾದ ರಾಜಾ ಚೆನ್ನಾರಕಟ್ಟೆ ಸ್ವಾಗತಿಸಿ, ಅವಿನಾಶ್ ರೈ ವಳಮಲೆ ವಂದಿಸಿದರು. ಸುಮಾರು 150 ರಷ್ಟು ಮಂದಿ ಆರೋಗ್ಯ ತಪಾಸಣೆಗೈದರು. ಮಂಗಳೂರು ಎಜೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ನುರಿತ ತಜ್ಞ ವೈದ್ಯರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಆರೋಗ್ಯ ತಪಾಸಣೆ ನಡೆಸಿದರು.




.jpg)
