: ಕೇರಳ ರಾಜ್ಯೋದಯ ದಿನವಾದ ನ. 1ರಂದು ಗಡಿನಾಡು ಕಾಸರಗೋಡಿನ ಕನ್ನಡಿಗರು ಹಕ್ಕೊತ್ತಾಯ ದಿವನ್ನಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟದ ಫಲವಾಗಿ ಮಹಾಜನ ಆಯೋಗದ ರಚನೆಯಾಗಿದ್ದು, ವಿಲೀನ ಸಾಧ್ಯವಾಗದಿದ್ದರೂ, ಕಾಸರಗೋಡನ್ನು ಕನ್ನಡ ಭಾಷಾ ಪ್ರದೇಶವೆಂದು ಕೇರಳ ಸರ್ಕಾರ ಘೋಷಿಸಿತ್ತು. ಆದರೆ ಕ್ರಮೇಣ ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲೆ ಕಡ್ಡಾಯ ಮಲಯಾಳ ಹೇರುವ ಪ್ರಕ್ರಿಯೆಯನ್ನು ಆರಂಭಿಸಿರುವ ಸರ್ಕಾರ, ಸಂವಿಧಾನಾತ್ಮಕ ಸವಲತ್ತುಗಳನ್ನೂ ಮರೆಮಾಚಿ, ಕನ್ನಡಿಗರ ಮೇಲೆ ಸವಾರಿ ಮಾಡಹೊರಟಿದೆ. ಬಹುಭಾಷಾ ಸಂಸ್ಕøತಿ ಹೊಂದಿರುವ ಕಾಸರಗೋಡಿನಲ್ಲಿ, ಇಲ್ಲಿನ ಬಹುಭಾಷಿಗರನ್ನುಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ಧ್ವನಿಯೆತ್ತುವಂತೆ ಮಾಡುವ ಉದ್ದಶದಿಂದ ಕಾಸರಗೋಡಿನ ಎಲ್ಲಾ ಕನ್ನಡಪರ ಸಂಘಟನೆಗಳನ್ನು ಒಟ್ಟುಸೇರಿಸಿ ಧರಣಿ ಆಯೋಜಿಸಲಾಗಿದೆ.
ಕನ್ನಡಿಗರ ಮೇಲೆ ಕಡ್ಡಾಯ ಮಲಯಾಳ ಹೇರಿಕೆ ಕೈಬಿಡಬೇಕು, ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಿತಕಾಪಾಡಬೇಕು, ಅರ್ಜಿ, ಸುತ್ತೋಲೆ ಕನ್ನಡದಲ್ಲೂ ಪೂರೈಸಬೇಕು, ಶಾಲಾ ಕಲೋತ್ಸವಗಳಲ್ಲಿ ಮಲಯಾಳ ವಿದ್ಯಾರ್ಥಿಗಳಿಗೆ ಒದಗಿಸುವ ಸ್ಪರ್ಧೆಗಳನ್ನು ಕನ್ನಡ ಮಾಧ್ಯಮವರಿಗೂ ನೀಡಬೇಕು, ಕಾಸರಗೋಡಿನಲ್ಲಿ ಸರ್ಕಾರಿ ಮುದ್ರಣಾಲಯ ಹಾಗೂ ಬದಿಯಡ್ಕದಲ್ಲಿ ಉಪಖಜಾನೆ ಸ್ಥಾಪಿಸಬೇಕು, ಕಾಸರಗೋಡುಇನ ಕಾರಡ್ಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪೋಟ್ರ್ಸ್ ಶಾಲೆ ಆರಂಭಿಸಿ, ಇದರಲ್ಲಿ ಶೇ. 50ಸೀಟು ಕನ್ನಡಿಗರಿಗೆ ಮೀಸಲಿರಿಸಬೇಕು, ಕಾಸರಗೋಡು, ಮಂಜೇಶ್ವರ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡಬಲ್ಲ ಸಿಬ್ಬಂದಿ ನೇಮಿಸಬೇಕುಮುಂತಾದ ಬೇಡಿಕೆ ಮುಂದಿರಿಸಿ ಬೆಳಗ್ಗೆ 10ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರನಿ ನಡೆಯಲಿದೆ.




