ಕಾಸರಗೋಡು: ಸಂವಿಧಾನಾತ್ಮಕ ಹಕ್ಕುಗಳನ್ನು ನಮ್ಮಿಂದ ಕಸಿದುಕೊಳ್ಳುವ ಯತ್ನದ ವಿರುದ್ಧ ಕನ್ನಡಿಗರು ನಡೆಸುವ ಹೋರಾಟದ ಬಗ್ಗೆ ಸರ್ಕಾರ ಎಚ್ಚೆತ್ತು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಮುರಳೀಧರ ಬಳ್ಳಕ್ಕುರಾಯ ತಿಳಿಸಿದ್ದಾರೆ.
ಅವರು ಕೋಟೆಎಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿಅ ಧ್ಯಕ್ಷತೆವಹಿಸಿ ಮಾತನಾಡಿದರು.
ಖ್ಯಾತ ನೃತ್ಯಕಲಾವಿದೆ ಮಂಗಳೂರಿನ ರೆಮೆನಾ ಇವೆಟ್ ಪೆರೆರಾ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಶೋಕಮಾತಾ ಇಗರ್ಜಿ ಧರ್ಮಗುರು ವಂದನೀಯ ಲೂಯಿಸ್ ಕುಟಿನ್ಹಾ ಶುಭಾಶೀರ್ವಚನ ನೀಡಿದರು. ಧಾರ್ಮಿಕ ಮುಂದಳು ಡಾ. ವೆಂಕಟ್ರಮಣ ಹೊಳ್ಳ, ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದರು. ಈ ಸಂದರ್ಭ ಕನ್ನಡ ಹಿತಚಿಂತಕ, ಲೋಕಸೇವಾ ಆಯೋಗದ ನಿವೃತ್ತ ಅಂಡರ್‍ಸೆಕ್ರೆಟರಿ ಗಣೇಶ್‍ಪ್ರಸಾದ್ ಪಾಣೂರು ಅವರಿಗೆ'ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ವೀಜಿ ಕಾಸರಗೋಡು ಅಭಿನಂದನಾ ಭಾಷಣ ಮಾಡಿದರು. ನೃತ್ಯ ಕಲಾವಿದೆ ರೆಮೆನಾ ಇವೆಟ್ ಪೆರೆರಾ ಹಾಗೂ ವೈವಾಹಿಕ ಜೀವನದ ಬೆಳ್ಳಿ ಹಬ್ಬ ಆಚರಿಸುತ್ತಿರುವ ಡಾ. ವೆಂಕಟ್ರಮಣ ಹೊಳ್ಳ ದಂಪತಿಯನ್ನು ಗೌರವಿಸಲಾಯಿತು. ದಿವಾಕರ ಪಿ. ಅಶೋಕ್‍ನಗರ ಕನ್ನಡ ಗೀತೆಗಳನ್ನು ಹಾಡಿದರು.
ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದುಷಿ ಕಾವ್ಯಾಭಟ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಕಾವ್ಯಾಕುಶಲ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ನಿರ್ದೇಶನದ ಗಡಿನಾಡ ಕನ್ನಡ ಸಾಹಿತ್ಯ-ಸಾಂಸ್ಕøತಿಕ ಸಂಸ್ಥೆಯಿಂದ ಸಾಹಿತ್ಯ-ಗಾನ-ನೃತ್ಯ ವೈಭವ ನಡೆಯಿತು. ಅಭಿಲಾಷ್‍ಮುಕುಂದರಾಜ್ ಕಾರ್ಯಕ್ರಮ ನಿರೂಪಿಸಿದರು.


