ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಆಡಳಿತ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಕುಖ್ಯಾತವಾಗಿದ್ದು, ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಡರಂಗವು ದೊಡ್ಡ ಹಿನ್ನಡೆ ಅನುಭವಿಸುವುದು ಖಚಿತ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಬಿಜೆಪಿ ಬೇಡಡ್ಕ ಪಂಚಾಯಿತಿ ಚುನಾವಣಾ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿರು.
ಕಡು ಬಡತನ ಕೇರಳ ಎಂಬುದು ಸರ್ಕಾರದ ಪೊಳ್ಳು ಘೋಷಣೆಯಾಗಿದ್ದು, ಇದರಿಂದ ಲಕ್ಷಾಂತರ ಕುಟುಂಬಗಳ ಆರ್ಥಿಕ ಪ್ರಯೋಜನಗಳಿಗೆ ಧಕ್ಕೆ ತರುವ ಆತಂಕವಿದೆ ಎಂದು ತಿಳಿಸಿದರು. ಬಿಜೆಪಿ ಬೇಡಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಉದಯನ್ ಚೆಂಬಕಾಡ್ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಉದುಮ ಖಂಡ ಸಂಘಚಾಲಕ್ ಗಿರಿಧರ್ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಮಂಡಲ ಸಮಿತಿ ಅಧ್ಯಕ್ಷ ದಿಲೀಪ್ ಪಲ್ಲಂಜಿ, ಪ್ರಧಾನ ಕಾರ್ಯದರ್ಶಿಗಳಾದ ಶಶಿಕುಮಾರ್, ಜಯಕುಮಾರ್ ಮಂಡುಕ್ಕಂ, ಬೇಡಡ್ಕ ಪಂಚಾಯಿತಿ ಸಮಿತಿ ಉಪಾಧ್ಯಕ್ಷ ಗೋಪಕುಮಾರ್ ್ಕುಪಸ್ಥಿತರಿದ್ದರು.


