ಮಂಜೇಶ್ವರ: ವರ್ಕಾಡಿ ದೇವೇಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನ ವಠಾರದಲ್ಲಿ ಜನವರಿ 3ರಂದು ನಡೆಯಲಿರುವ ಶ್ರೀ ಅಯ್ಯಪ್ಪ ದೀಪೆÇೀತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಅರ್ಚಕರಾದ ರಾಘವೇಂದ್ರ ಆಚಾರ್ಯ ಬಿಡುಗಡೆಗೊಳಿಸಿದರು. ಐತಪ್ಪ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಸೀತಾರಾಮ ಗುರುಸ್ವಾಮಿ, ಸುರೇಶ್ ಸ್ವಾಮಿ, ಬೋಳದಪದವು ಬ್ರಹ್ಮ ಮುಗೇರ ಸೇವಾ ಸಮಿತಿ ಅಧ್ಯಕ್ಷ ಶೀನ ಬೋಳದ ಪದವು, ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ಮಾಧವ ಪೂಜಾರಿ ಕುದುಕೋರಿ, ಕೇಶವ ಕಿನ್ಯ ಕಜೆ, ರವಿಮುಡಿಮಾರು, ಜನಾರ್ದನ ಪೂಜಾರಿ ಕುಡುಂಬುಲೆ ಗುರಿ, ಶಾಮ ನಾಯ್ಕ ಕೆದುಂಬಾಡಿ ಮೊದಲಾದವರು ಉಪಸ್ಥಿತರಿದ್ದರು.
ಜ. 3ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ ದಂಗವಾಗಿ ಗಣಪತಿ ಹೋಮ, ಭಜನಾ ಸಂಕೀರ್ತನೆ, ನೆತ್ತಿಲಪದವು ಶ್ರೀ ಕೃಷ್ಣ ಭಜನಾ ಮಂದಿರ ವಠಾರದಿಂದ ತಾಲಿಪೆÇಲಿ ಶೋಭಾ ಯಾತ್ರೆ, ತಾಯಂಬಕ ವಾದನ, ಮಹಾಪೂಜೆ, ಅನ್ನ ಸಂತರ್ಪಣೆ ಯು ನಡೆಯಲಿರುವುದು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ಇವರಿಂದ ಶ್ರೀ "ಶಬರಿಮಲೆ ಅಯ್ಯಪ್ಪ "ಯಕ್ಷಗಾನ ಬಯಲಾಟ ನಡೆಯಲಿರುವುದು.





