ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಸ್ಥಾನವೆಂದೇ ಖ್ಯಾತಿ ಪಡೆದಿರುವ ಮಂಜೇಶ್ವರ ಶ್ರೀಮತ್.ಅನಂತೇಶ್ವರ ದೇವಸ್ಥಾನದ ಷಷ್ಠೀ ಮಹೋತ್ಸವ ನ.21 ರಂದು ಆರಂಭಗೊಂಡಿದ್ದು 27ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನ.21 ರಂದು ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಪಲ್ಲಂಕಿ ಉತ್ಸವ, ವಸಂತಪೂಜೆ, ಮಂಗಳಾರತಿ ನಡೆಯಿತು.22 ರಂದು ಬೆಳಿಗ್ಗೆ ಮೃತ್ತಿಕಾರೋಹಣ, ಶ್ರೀದೇವರು ಯಜ್ಞಕ್ಕೆ ಆಗಮನ, ಮಧ್ಯಾಹ್ನ ಧ್ವಜಾರೋಹಣ, ಯಜ್ಞಾರತಿ, ಬಲಿ, ಮಹಾಪೂಜೆ, ಸಮಾರಾಧನೆ, ರಾತ್ರಿ ಬೊಂಬೆ ಚವರು ಉತ್ಸವ, ವಸಂತಪೂಜೆ, ಮಂಗಳಾರತಿ ನಡೆಯಿತು. ನ.23 ರಂದು ಭಾನುವಾರ ಬೆಳಿಗ್ಗೆ ಹಗಲು ಉತ್ಸವ, ಯಜ್ಞ, ಯಜ್ಞಾರತಿ, ಬಲಿ, ಸಂಜೆ ಮಹಾಪೂಜೆ, ಸಮಾರಾಧನೆ, ರಾತ್ರಿ ಮರದ ಲಾಲ್ಕಿ ಚಂದ್ರಮಂಡಲ, ಸಣ್ಣ ರಥೋತ್ಸವಗಳು, ವಸಂತಪೂಜೆ, ಮಂಗಳಾರತಿ ನಡೆಯಿತು.
ಇಂದು(ನ.24) ಬೆಳಿಗ್ಗೆ ಸ್ವರ್ಣ ಪಲ್ಲಂಕಿ ಹಗಲು ಉತ್ಸವ, ಯಜ್ಞ, ಯಜ್ಞಾರತಿ ಬಲಿ, ಮಹಾಪೂಜೆ, ಸಮಾರಾಧನೆ, ರಾತ್ರಿ 8.30 ರಿಂದ ಗರುಡ ಮಂಟಪ, ಚಂದ್ರ ಮಂಡಲ, ಸಣ್ಣ ರಥೋತ್ಸವಗಳು, ವಸಂತಪೂಜೆ, ಮಂಗಳಾರತಿ ನಡೆಯಲಿದೆ. ನ.25 ರಂದು ಪಂಚಮಿ ಉತ್ಸವದಂಗವಾಗಿ ದಿನಪೂರ್ತಿ ಅಭಿಷೇಕ, ತುಲಾಭಾರ ಸಹಿತ ವಿವಿಧ ವಿಧಿವಿಧಾನಗಳು ನಡೆಯಲಿದೆ. 26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಧರ್ಮ, ಬಳಿಕ ಮಹಾಪೂಜೆ, ಯಜ್ಞ, ಪೂರ್ಣಾಹುತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ, ರಥಾರೋಹಣಕ್ಕೆ ಹೊರಡುವುದು, ಸಂಜೆ 6ಕ್ಕೆ ರಥಾರೋಹಣ, ರಾತ್ರಿ 8.30ಕ್ಕೆ ರಥಾವರೋಹಣ, ಮಂಗಳಾರತಿ, ಸಮಾರಾಧನೆ ನಡೆಯಲಿದೆ. 27 ರಂದು ಮಂದ್ಯಾಹ್ನ 1.30ಕ್ಕೆ ಅವಭೃತ, ಸಂಜೆ ಮರದ ಸಣ್ಣ ಲಾಲ್ಕಿ ರಥೋತ್ಸವ, ಶೇಷತೀರ್ಥ ಸ್ನಾನ, ಸಂಜೆ 6ಕ್ಕೆ ಧ್ವಜಾವರೋಹಣ, ಗೆಇ ಪ್ರಸಾದ ವಿತರಣೆ, ರಾತ್ರಿ 10ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.




.jpg)
.jpg)
.jpg)
