ಮಂಜೇಶ್ವರ: ಮಂಜೇಶ್ವರದ ಇತಿಹಾಸ ಪ್ರಸಿದ್ಧಶ್ರೀಮದ್ ಅನಂತೇಶ್ವರ ದೇವಸ್ಥಾನದ ಷಷ್ಠೀ ಮಹೋತ್ಸವದ ಸಂದರ್ಭದಲ್ಲಿ ಶಿಕ್ಷಕ, ಕವಿ, ಗಾಯಕ ಗಣೇಶ್ ಪ್ರಸಾದ್ ನಾಯಕ್ ರಚಿಸಿ ಸಂಯೋಜಿಸಿದ "ಷಷ್ಠಿ ವೈಭವ" ಧ್ವನಿ ಸುರುಳಿ ಭಾನುವಾರ ಬಿಡುಗಡೆಗೊಂಡಿತು.
ದೇವಳದ ಅಧ್ಯಕ್ಷ ಗಣಪತಿ ಪೈ ಧ್ವನಿಸುರುಳಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ದೇವಳದ ಆಡಳಿತ ಮಂಡಳಿಯ ಮೊಕ್ತೆಸರರಾದ ನಿತಿನ್ ಚಂದ್ರ ಪೈ, ಪ್ರಶಾಂತ್ ಪೈ ಮತ್ತು ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದರು. ಭಕ್ತನೊಬ್ಬನ ನೈಜ ಅನುಭವದ ಆಧಾರದಲ್ಲಿ ಭಾವ ಪ್ರಧಾನವಾಗಿ ಗೀತೆಯ ಸಾಹಿತ್ಯವಿದ್ದು, ಸುಶ್ರಾವ್ಯವಾದ ಧ್ವನಿ, ಮತ್ತು ಮನಮುಟ್ಟುವ ದೃಶ್ಯ ಸಂಯೋಜನೆಯೊಂದಿಗೆ ಗೀತೆ ಮೂಡಿಬಂದು ಜನಮನ ಸೆಳೆಯುತ್ತಿದೆ.




.jpg)
