HEALTH TIPS

Dubai Air Show 2025 | 'ಸೂರ್ಯಕಿರಣ', 'ತೇಜಸ್‌' ಚಮತ್ಕಾರಕ್ಕೆ ಮನಸೋತ ಪ್ರೇಕ್ಷಕ

ದುಬೈ: ನಗರದ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ 'ದುಬೈ ಏರ್ ಶೋ 2025'ರಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನೀಡುವ ಮೂಲಕ ಜಾಗತಿಕ ಗಮನ ಸೆಳೆದಿವೆ. 

ಭಾರತೀಯ ವಾಯುಪಡೆಯ 'ಸೂರ್ಯಕಿರಣ' ತಂಡವು ವೈಮಾನಿಕ ಪ್ರದರ್ಶನ ನಡೆಸಿತು.

ಹಾಗೆಯೇ ಆಗಸದಲ್ಲಿ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) 'ತೇಜಸ್‌' ಲಘು ಯುದ್ಧ ವಿಮಾನಗಳ ಕೌಶಲಯುತ ಹಾರಾಟ ರೋಮಾಂಚನಗೊಳಿಸಿತು.

ಏರ್ ಶೋನಲ್ಲಿ ಯುಎಇ ವಾಯುಪಡೆಯ ಫರ್ಸಾನ್ ಅಲ್ ಎಮರತ್, ಬೋಯಿಂಗ್‌ನ 777X, ರಷ್ಯಾದ ಸುಖೋಯ್-57, ಕಾಮೋವ್‌ನ ಕಾ-52 ಹೆಲಿಕಾಪ್ಟರ್‌ಗಳು ಬಾನಂಗಳದಲ್ಲಿ ಸೃಷ್ಟಿಸಿದ ಚಮತ್ಕಾರ ಕಂಡು ಪ್ರೇಕ್ಷಕರು ಬೆರಗಾಗಿದ್ದಾರೆ.

ದುಬೈ ಏರ್ ಶೋವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಈ ಬಾರಿ ಬೊಂಬಾರ್ಡಿಯರ್, ಡಸಾಲ್ಟ್ ಏವಿಯೇಷನ್, ಎಂಬ್ರೇರ್, ಥೇಲ್ಸ್, ಏರ್‌ಬಸ್, ಲಾಕ್‌ಹೀಡ್ ಮಾರ್ಟಿನ್ ಮತ್ತು ಕ್ಯಾಲಿಡಸ್‌ನಂತಹ ಪ್ರಮುಖ ಅಂತರರಾಷ್ಟ್ರೀಯ ಏರೋಸ್ಪೇಸ್ ಕಂಪನಿಗಳು ಸೇರಿದಂತೆ 150 ದೇಶಗಳಿಂದ 1,500ಕ್ಕೂ ವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿವೆ ಎಂದು ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries