ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂದು (ಶುಕ್ರವಾರ) ಜೊಹಾನ್ಸ್‌ಬರ್ಗ್‌ಗೆ ಆಗಮಿಸಿದ್ದಾರೆ.
ಆಫ್ರಿಕಾದಲ್ಲಿ ನಡೆಯುತ್ತಿರುವ ಮೊತ್ತ ಮೊದಲ ಜಿ20 ಶೃಂಗಸಭೆ ಇದಾಗಿದೆ.
ಗೌಟೆಂಗ್‌ನ ವಾಟರ್‌ಕ್ಲೂಫ್‌ನಲ್ಲಿರುವ ವಾಯು ಸೇನಾ ನೆಲೆಗೆ ಆಗಮಿಸಿದ ಪ್ರಧಾನಿ ಮೋದಿಯನ್ನು, ಸಾಂಸ್ಕೃತಿಕ ಹಾಡು ಮತ್ತು ನೃತ್ಯದ ಮೂಲಕ ಕಲಾವಿದರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ.
'ಜಿ20 ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ ಜೊಹಾನ್ಸ್‌ಬರ್ಗ್‌ಗೆ ಬಂದಿಳಿದಿದ್ದೇನೆ. ವಿಶ್ವದ ನಾಯಕರೊಂದಿಗೆ ಜಗತ್ತಿನ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆಸಲು ಉತ್ಸುಕನಾಗಿದ್ದೇನೆ. ಸಹಕಾರವನ್ನು ಬಲಪಡಿಸುವುದು, ಅಭಿವೃದ್ಧಿಯ ಆದ್ಯತೆಗಳನ್ನು ಮುಂದುವರೆಸುವುದು ಮತ್ತು ಎಲ್ಲರಿಗೂ ಉತ್ತರ ಭವಿಷ್ಯವನ್ನು ಖಚಿತಪಡಿಸುವುದರ ಕುರಿತು ನಮ್ಮ ಗಮನವಿದೆ' ಎಂದು ಹೇಳಿದ್ದಾರೆ.




