ಬೆಂಗಳೂರು: ಎಲಾನ್ ಮಸ್ಕ್ ಮಾಲೀಕತ್ವದ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಂಗಳವಾರ ಜಾಗತಿಕ ಮಟ್ಟದಲ್ಲಿ ಸೇವೆಯಲ್ಲಿ ವ್ಯತ್ಯಯವಾಗಿದೆ. ಲಕ್ಷಾಂತರ ಬಳಕೆದಾರರು ಲಾಗಿನ್, ಫೀಡ್, ಹೊಸ ಪೋಸ್ಟ್‌ಗಳನ್ನು ತೋರಿಸದಿರುವುದು ಹಾಗೂ ಅಪ್ಲಿಕೇಶನ್-ವೆಬ್‌ಸೈಟ್ ಎರಡಕ್ಕೂ ಪ್ರವೇಶ ಸಾಧ್ಯವಾಗದೇ ಸಮಸ್ಯೆ ಎದುರಿಸಿದರು.
ಡೌನ್‌ಡೆಕ್ಟರ್ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನ ಸಂಜೆ 5:15 ಕ್ಕೆ X ಕುರಿತು 11,500 ಕ್ಕೂ ಹೆಚ್ಚು ದೂರು ದಾಖಲಾಗಿವೆ. ಇವುಗಳಲ್ಲಿ 47% ಫೀಡ್ ಲೋಡ್ ಸಮಸ್ಯೆ, 30% ವೆಬ್‌ಸೈಟ್ ದೋಷ, 23% ಸರ್ವರ್ ಸಂಪರ್ಕ ವ್ಯತ್ಯಯ ಕುರಿತು ದೂರು ದಾಖಲಾಗಿದೆ.
ಅಡಚಣೆಗೆ ಮೂಲ ಕಾರಣದ ಬಗ್ಗೆ ಎಕ್ಸ್ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.




