HEALTH TIPS

ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥನಿಗೆ 14 ವರ್ಷ ಜೈಲು; ಮಿಲಿಟರಿ ಕೋರ್ಟ್‌ ಆದೇಶ

ಇಸ್ಲಾಮಾಬಾದ್: ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್ (Faiz Hameed) ಅವರಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ, ಮಿಲಿಟರಿ ಕೋರ್ಟ್ ಘೋಷಿಸಿದೆ. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ (FGCM) ಈ ತೀರ್ಪು ನೀಡಿದೆ.

ಇದು ಪಾಕಿಸ್ತಾನದ (Pakistan) ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಗುಪ್ತಚರ ಮುಖ್ಯಸ್ಥರೊಬ್ಬರ ಪತನವನ್ನು ಸೂಚಿಸುತ್ತದೆ.

ಮಿಲಿಟರಿ ನ್ಯಾಯಾಲಯವು ಹಮೀದ್ ಅವರನ್ನು ಹಲವಾರು ದುಷ್ಕೃತ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಘೋಷಿಸಿತು. ಇದು ಪಾಕಿಸ್ತಾನದ ಮಿಲಿಟರಿ ಅಥವಾ ರಾಜಕೀಯದಲ್ಲಿ ಅಭೂತಪೂರ್ವ ತೀರ್ಪು ಎಂದು ವಿಶ್ಲೇಷಿಸಲಾಗಿದೆ.

ಹಮೀದ್ ವಿರುದ್ಧ 2024ರ ಆಗಸ್ಟ್ 12ರಂದು ಪಾಕಿಸ್ತಾನ ಸೇನಾ ಕಾಯ್ದೆ ಅಡಿಯಲ್ಲಿ ಆರಂಭವಾಗಿ, 15 ತಿಂಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಯಿತು. ಈ ಅವಧಿಯಲ್ಲಿ, ಪ್ರೊಸಿಕ್ಯೂಟರ್‌ಗಳು ನಾಲ್ಕು ಪ್ರಮುಖ ಆರೋಪಗಳನ್ನು ಮುಂದಿಟ್ಟಿದ್ದರು: ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು, ರಾಜ್ಯ ಭದ್ರತೆಗೆ ಹಾನಿ ಉಂಟುಮಾಡುವ ರೀತಿಯಲ್ಲಿ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು, ಅಧಿಕಾರ ಮತ್ತು ಸರ್ಕಾರಿ ಸಂಪನ್ಮೂಲಗಳನ್ನು ದುರುಪಯೋಗ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಸೇನೆಯ ಸುದೀರ್ಘ ಮತ್ತು ಪ್ರಯಾಸಕರ ವಿಚಾರಣೆಗಳ ನಂತರ, ನ್ಯಾಯಾಲಯವು ಹಮೀದ್‌ ಅವರನ್ನು ಎಲ್ಲಾ ಆರೋಪಗಳಲ್ಲೂ ದೋಷಿ ಎಂದು ತೀರ್ಪು ನೀಡಿತು. 14 ವರ್ಷದ ಕಠೋರ ಕಾರಾಗೃಹ ಶಿಕ್ಷೆಯ ತೀರ್ಪನ್ನು ಅಧಿಕೃತವಾಗಿ ಡಿಸೆಂಬರ್ 11, 2025 ರಂದು ಘೋಷಿಸಲಾಯಿತು.

ವಿಚಾರಣೆಯು ಎಲ್ಲಾ ಕಾನೂನು ಅಗತ್ಯಗಳನ್ನು ಪಾಲಿಸಿದೆ ಎಂದು ISPR ಒತ್ತಿಹೇಳಿತು. ಮಾಜಿ ಗುಪ್ತಚರ ಮುಖ್ಯಸ್ಥ ಹಮೀದ್ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ರಕ್ಷಣಾ ತಂಡವನ್ನು ನೇಮಿಸುವ ಹಕ್ಕು ಸೇರಿದಂತೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿದೆ ಎಂದು ತಿಳಿಸಿದೆ. ಹಮೀದ್‍ಗೆ ತಮ್ಮ ತೀರ್ಪಿನ ವಿರುದ್ಧ ನ್ಯಾಯಾಂಗದ ಮುಂದೆ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ.

ಹಮೀದ್ ಅವರು ರಾಜಕೀಯ ಅಸ್ಥಿರತೆ ಮತ್ತು ಕಲಹವನ್ನು ಉತ್ತೇಜಿಸುವಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ, ಕೆಲವು ರಾಜಕೀಯ ವ್ಯಕ್ತಿಗಳೊಂದಿಗೆ ಸಹಕಾರದಲ್ಲಿದ್ದರು ಎಂಬ ಆರೋಪ ಅವರ ಮೇಲಿದೆ. ಇದಕ್ಕೆ ಸಂಬಂಧಪಟ್ಟ ವಿಚಾರಣೆಯನ್ನು ಪ್ರತ್ಯೇಕವಾಗಿ ಮುಂದುವರಿಸುತ್ತಿದ್ದು, ಅದರ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪತ್ರಕರ್ತೆಗೆ ಕಣ್ಣು ಮಿಟುಕಿಸಿದ್ದ ಪಾಕ್ ಲೆಫ್ಟಿನೆಂಟ್ ಜನರಲ್

ಇತ್ತೀಚೆಗಷ್ಟೇ, ಪತ್ರಿಕಾಗೋಷ್ಠಿಯ ಸಮಯದಲ್ಲಿ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಪತ್ರಕರ್ತೆಯೊಬ್ಬರ (Woman Journalist) ಕಡೆಗೆ ನೋಡಿ ಕಣ್ಣು ಮಿಟುಕಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು.

ಪತ್ರಕರ್ತೆ ಅಬ್ಸಾ ಕೋಮಲ್ ಅವರು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಚೌಧರಿ ಮಾಡಿರುವ ಆರೋಪಗಳನ್ನು ಪ್ರಶ್ನಿಸಿದ್ದರು. ಚೌಧರಿ ಮಾತನಾಡಿ ಇಮ್ರಾನ್ ಖಾನ್, ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ರಾಷ್ಟ್ರ ವಿರೋಧಿ ಮತ್ತು ದೆಹಲಿ ಸೂಚನೆಗಳ ಮೇರೆಗೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ಅವರು ಮಾನಸಿಕ ರೋಗಿ ಕೂಡ ಎಂದು ಚೌಧರಿ ವ್ಯಂಗ್ಯವಾಡಿದ್ದರು. ನಂತರ ಮುಗುಳ್ನಕ್ಕು, ಪತ್ರಕರ್ತೆ ಅಬ್ಸಾ ಕೋಮಲ್ ಕಡೆಗೆ ಕಣ್ಣು ಮಿಟುಕಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries