HEALTH TIPS

ಆಸ್ಪತ್ರೆಯ ಮೇಲೆ ಮಯನ್ಮಾರ್ ಸೇನೆಯ ವೈಮಾನಿಕ ದಾಳಿ; 31 ಸಾವು, 68 ಮಂದಿಗೆ ಗಾಯ

ನಾಯ್ಪಿಡೋ: ಆಸ್ಪತ್ರೆಯ ಮೇಲೆ ಮಿಲಿಟರಿ ಜಂಟಾ ನಡೆಸಿದ ವೈಮಾನಿಕ ದಾಳಿಯಲ್ಲಿ (Airstrike) 31 ಜನರು ಮೃತಪಟ್ಟು, 68 ಮಂದಿ ಮೃತಪಟ್ಟ ದಾರುಣ ಘಟನೆ ಮಯನ್ಮಾರ್‌ನಲ್ಲಿ (Myanmar) ನಡೆದಿದೆ. 2021ರ ದಂಗೆಯಲ್ಲಿ ಸೇನೆಯು ಅಧಿಕಾರವನ್ನು ಕಸಿದುಕೊಂಡ ನಂತರ ಸೇನೆಯು ವರ್ಷದಿಂದ ವರ್ಷಕ್ಕೆ ವಾಯುದಾಳಿಗಳನ್ನು ಹೆಚ್ಚಿಸಿದೆ.

ಈ ಘಟನೆ ರಾಷ್ಟ್ರದಲ್ಲಿ ನಡೆಯುತ್ತಿರುವ ಮಾನವೀಯ ಸಂಕಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಪರಿಸ್ಥಿತಿ ತುಂಬಾ ಭಯಾನಕವಾಗಿದೆ. 31 ಸಾವುಗಳು ಸಂಭವಿಸಿವೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪಶ್ಚಿಮ ರಾಖೈನ್ ರಾಜ್ಯದ ಮ್ರೌಕ್-ಯು ಪಟ್ಟಣದ ಸಾಮಾಜಿಕ ಕಾರ್ಯಕರ್ತ ವೈ ಹುನ್ ಆಂಗ್ ಹೇಳಿದ್ದಾರೆ.

ಮಯನ್ಮಾರ್ ಸೇನೆಯು ಡಿಸೆಂಬರ್ 28ರಂದು ಚುನಾವಣೆ ಮಾಡುವುದಾಗಿ ಘೋಷಿಸಿದೆ. ಹೋರಾಟವನ್ನು ಅಂತ್ಯಗೊಳಿಸುವ ಒಂದು ಮಾರ್ಗವೇ ಈ ಚುನಾವಣೆ ಎಂದು ಅದು ಹೇಳಿದೆ. ಆದರೆ, ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಮತದಾನವನ್ನು ತಡೆಯುವುದಾಗಿ ಬಂಡುಕೋರರು ಪ್ರತಿಜ್ಞೆ ಮಾಡಿಕೊಂಡಿದ್ದು, ಆ ಪ್ರದೇಶಗಳನ್ನು ಮರಳಿ ಕಬಳಿಸಲು ಸೇನೆ ತೀವ್ರ ಯುದ್ಧ ಮಾಡುತ್ತಿದೆ.

ಚಹಾ ಅಂಗಡಿಯ ಮೇಲೆ ವೈಮಾನಿಕ ದಾಳಿ

ಡಿಸೆಂಬರ್ 5ರಂದು ರಾತ್ರಿ 8 ಗಂಟೆಯ ನಂತರ ಟಬಾಯಿನ್ ತಾಲ್ಲೂಕಿನ ಮಯಾಕನ್ ಗ್ರಾಮದ ಒಂದು ಚಹಾ ಅಂಗಡಿಯ ಮೇಲೆ ದಾಳಿ ನಡೆಯಿತು. ಮಯನ್ಮಾರ್‌ನ ಎರಡನೇ ಅತಿ ದೊಡ್ಡ ನಗರವಾದ ಮಂಡಲೇಯಿಂದ ಸುಮಾರು 120 ಕಿಲೋಮೀಟರ್ (75 ಮೈಲಿ) ವಾಯುವ್ಯಕ್ಕೆ ಇರುವ ಈ ಗ್ರಾಮ, ಡೆಪಾಯಿನ್ ಎಂಬ ತನ್ನ ಹಳೆಯ ಹೆಸರಿನಿಂದಲೇ ಹೆಚ್ಚು ಪರಿಚಿತವಾಗಿದೆ.

ದಾಳಿ ನಡೆದ ಸ್ಥಳಕ್ಕೆ ಸಂತ್ರಸ್ತರಿಗೆ ಸಹಾಯ ಮಾಡಲು ಗ್ರಾಮಸ್ಥರು ಧಾವಿಸಿದರು. ಈ ವೇಳೆ ಅಲ್ಲಿನ ಕರಾಳ ಸ್ಥಿತಿಯನ್ನು ಬಿಚ್ಚಿಟ್ಟರು. ಟೀ ಅಂಗಡಿಯಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರಲ್ಲಿ ಐದು ವರ್ಷದ ಮಗು ಮತ್ತು ಇಬ್ಬರು ಶಾಲಾ ಶಿಕ್ಷಕರಿದ್ದರು ಎಂದು ತಿಳಿಸಿದ್ದರು. ಆ ಸ್ಥಳದಲ್ಲಿ ಮಯನ್ಮಾರ್ ಮತ್ತು ಫಿಲಿಪೈನ್ಸ್ ನಡುವಿನ ಫುಟ್ಬಾಲ್ ಪಂದ್ಯಾವಳಿಯನ್ನು ದೂರದರ್ಶನದಲ್ಲಿ ವೀಕ್ಷಿಸಲು ಹಲವಾರು ಜನರು ಸೇರಿದ್ದರು.

ಮಯನ್ಮಾರ್‌ನಲ್ಲಿರುವ ಚಹಾ ಅಂಗಡಿಗಳು ಬಹಳ ಪ್ರಸಿದ್ಧಿ ಪಡೆದಿವೆ. ಅಲ್ಲಿ ಜನರು ಮಾತನಾಡಲು ಸೇರುತ್ತಾರೆ, ಕಾಲಹರಣ ಮಾಡುತ್ತಾರೆ. ಎಂದಿನಂತೆ ಆ ಸ್ಥಳದಲ್ಲಿ ಡಜನ್‌ಗಟ್ಟಲೇ ಜನರು ಸೇರಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದಾಳಿ ನಡೆಯಿತು. ಸಂತೋಷದಿಂದ ಹರಟುತ್ತಿದ್ದ ಜಾಗ ಸ್ಮಶಾನ ಮೌನವಾಯಿತು.

ತ್ರಿಕೋನ ಪ್ರೇಮಕಥೆಯಲ್ಲಿ ಯುವಕನ ದಾರುಣ ಅಂತ್ಯ

ತ್ರಿಕೋನ ಪ್ರೇಮಕಥೆ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಒಡಿಶಾದ ಸಂಬಲ್ಪುರ ಜಿಲ್ಲೆಯ ಖೇತ್ರಾಜಪುರ ಪ್ರದೇಶದಲ್ಲಿ ನಡೆದಿದೆ. ಲಕ್ಷ್ಮಿದುಂಗುರಿ ಬೆಟ್ಟದಲ್ಲಿ ಯುವಕನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮಹತ್ವದ ವಿಚಾರವನ್ನು ಪತ್ತೆಹಚ್ಚಿದ್ದಾರೆ. ಇದು ಸಾಮಾನ್ಯ ಸಾವಲ್ಲ, ಆದರೆ ತ್ರಿಕೋನ ಪ್ರೇಮಕಥೆಯಿಂದ ಉಂಟಾದ ಪೂರ್ವನಿಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಮುಖ ಆರೋಪಿ ಅಶುತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವ ಅಪ್ರಾಪ್ತ ಬಾಲಕಿಯನ್ನು ಬಂಧಿಸಲಾಗಿದೆ. ಹತ್ಯೆಯ ಸಮಯದಲ್ಲಿ ಹಾಜರಿದ್ದ ಮೂರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ, ಅವನಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ.

ತನಿಖೆಯಲ್ಲಿ ಮೃತ ಯುವಕ ಅಭಯ್ ದಾಸ್ ಒಬ್ಬ ಅಪ್ರಾಪ್ತ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿದೆ. ನಂತರ, ಹುಡುಗಿ ಅಶುತೋಷ್‌ನನ್ನು ಭೇಟಿಯಾದಳು. ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಇದು ಮೂವರ ನಡುವೆ ಜಗಳಕ್ಕೆ ಕಾರಣವಾಯಿತು. ಅಶುತೋಷ್ ಮತ್ತು ಹುಡುಗಿ ತಮ್ಮ ಸಂಬಂಧ ಮುಂದುವರಿಯಲು ಅಭಯ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries