HEALTH TIPS

ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ: ಡಿಸೆಂಬರ್ 2 ಮತ್ತು 3 ರಂದು ವೇದಿಕೆಯೇತರ ಸ್ಪರ್ಧೆಗಳು

ಕುಂಬಳೆ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ವೇದಿಕೆಯೇತರ ಸ್ಪರ್ಧೆಗಳು ಡಿಸೆಂಬರ್ 2 ಮತ್ತು 3 ರಂದು ಮೊಗ್ರಾಲ್ ಸರ್ಕಾರಿ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆಯಲ್ಲಿ(ವೊಕೇಶನಲ್ ಹೈಯರ್ ಸೆಕೆಂಡರಿ) ನಡೆಯಲಿದೆ.

ಈ ಸ್ಪರ್ಧೆಗಳಲ್ಲಿ ಸುಮಾರು ವಿವಿಧ ಶಾಲೆಗಳ ಹಿರಿಯ ಪ್ರಾಥಮಿಕ, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗದ 500 ರಷ್ಟು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಲೋತ್ಸವದ ವೇದಿಕೆ ಸ್ಪರ್ಧೆಗಳು ಜನವರಿ 5 ರಿಂದ 7 ರವರೆಗೆ ನಡೆಯಲಿವೆ. ಇದಕ್ಕಾಗಿ ಸಿದ್ಧತೆಗಳನ್ನು ಪರಿಶೀಲಿಸಲು ವಿವಿಧ ಉಪಸಮಿತಿಗಳ ಸಭೆ ನಡೆಯಿತು. 

ಸಂಘಟನಾ ಸಮಿತಿಯ ಅಧ್ಯಕ್ಷರು, ಸಂಚಾಲಕರು, ಉಪ ಸಮಿತಿಯ ಅಧ್ಯಕ್ಷರು, ಸಂಚಾಲಕರು, ಪಿಟಿಎ-ಎಸ್‍ಎಂಸಿ-ಮದರ್ ಪಿಟಿಎ ಸದಸ್ಯರು, ಸಿಬ್ಬಂದಿ ಮಂಡಳಿ ಸದಸ್ಯರು, ಎನ್‍ಜಿಒ ಪದಾಧಿಕಾರಿಗಳು ಮತ್ತು ಕ್ಲಬ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. 



ಹೈಲೈಟ್ಸ್:

-ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ವೇದಿಕೆಯೇತರ  ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿದ್ಯಾರ್ಥಿಗಳು.

- ಜನವರಿ 5 ರಿಂದ 7 ರವರೆಗೆ ರಂಗ ಸ್ಪರ್ಧೆಗಳು ನಡೆಯಲಿವೆ.

- ಕಲೋತ್ಸವದ ಸಿದ್ಧತೆಗಳನ್ನು ಪರಿಶೀಲಿಸಲು ಉಪಸಮಿತಿಗಳ ಸಭೆ ನಡೆಯಿತು. 

- ಪಿಟಿಎ, ಎಸ್‍ಎಂಸಿ ಮತ್ತು ಮದರ್ ಪಿಟಿಎ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

- ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳು ಮತ್ತು ಕ್ಲಬ್ ಪ್ರತಿನಿಧಿಗಳು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries