ಕಾಸರಗೋಡು: ಹದಿನೆಂಟರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯನ್ನಾಗಿಸಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹದಿಮೂರು ವರ್ಷಗಳ ನಂತರ ಪೊಲಿಸರು ಬಂಧಿಸಿದ್ದಾರೆ. ತಮಿಳ್ನಾಡು ಕೊಯಂಬತ್ತೂರು ಮಧುಕರೈ ನಿವಾಸಿ ವಿನಾಯಕನ್(68)ಬಂಧಿತ.
2012ರಲ್ಲಿ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ 18ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಈತನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದ ನಂತರ ಜಾಮೀನಿನಲ್ಲಿ ಹೊರಬಂದ ಈತ ತಲೆಮರೆಸಿಕೊಂಡಿದ್ದನು. ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಈತ ತಮಿಳ್ನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಡಿವೈಎಸ್‍ಪಿ ವಿ.ವಿಮನೋಜ್ ನಿರ್ದೇಶದನ್ವಯ ಇನ್ಸ್‍ಪೆಕ್ಟರ್ ರಂಜಿತ್ ರವೀಂದ್ರನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದೆ. ಆರೋಪಿಯನ್ನು ನ್ಯಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕಕೆ ಒಪ್ಪಿಸಲಾಗಿದೆ.




