ಕಾಸರಗೋಡು: ಬೀರಿಕುಲಂನ ಪೆÇೀಟ್ಟಡ್ಕದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ್ಟ ಮಹೋತ್ಸವ ಜನವರಿ 30, 31 ಮತ್ತು ಫೆಬ್ರವರಿ 1 ರಂದು ನಡೆಯಲಿದೆ. ಜನವರಿ 30 ರಂದು ಸಂಜೆ 6.30 ಕ್ಕೆ ಉದ್ಘಾಟನಾ ಸಮಾರಂಭ, ನಂತರ ದೀಪಾರಾಧನೆ ನಡೆಯಲಿದೆ. ಸಂಜೆ 7ಕ್ಕೆ ಕಳಿಯಾಟಕ್ಕೆ ಚಾಲನೆ ನೀಡಲಾಗುವುದು.
31 ರಂದು, ಬೆಳಿಗ್ಗೆ ವಿಷ್ಣು ಮೂರ್ತಿ, ಮಧ್ಯಾಹ್ನ ಚಾಮುಂಡೇಶ್ವರಿ ಮತ್ತು ಗುಳಿಗ ದೈವದ ನರ್ತನ ಸೇವೆ ನಡೆಯುವುದು. ಸಂಜೆ ವಟ್ಟಕ್ಕಯಂ ಕಾವಿಲ್‍ನಲ್ಲಿ ದೀಪಾರಾಧನೆ, ಪೋಟ್ಟಡ್ಕತ್ತಮ್ಮನ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ತೋಟ್ಟಂಪಾಟ್, ವಟ್ಟಕ್ಕಯಂ ಕಾವಿಲ್‍ನಿಂದ ವೀರನ್ ತೆಯ್ಯಂ, ಭೈರವನ್ ತೆಯ್ಯಂನೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ.ಫೆ.1ರಂದು ವಿಷ್ಣುಮೂರ್ತಿ, ಪೆÇೀಟ್ಟಡ್ಕಕ್ಕತಮ್ಮ, ಗುಳಿಗ ದೈವಗಲ ನಿರ್ಗಮನ, ಚಾಮುಂಡೇಶ್ವರಿ ಪೆÇೀಟ್ಟಡ್ಕತ್ತ್ ಹಾಗೂ ವಟ್ಟಕ್ಕಾಯತ್ ಚಾಮುಂಡೇಶ್ವರಿ ವಟ್ಟ ದ್ಯವಗಳ ಭೇಟಿನಡೆಯುವುದು.




