ಕಾಸರಗೋಡು: ವಿಶ್ವ ಏಡ್ಸ್ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಡಿಸೆಂಬರ್ 1 ರಂದು ಕಾಞಂಗಾಡ್ ವ್ಯಾಪಾರಿ ಭವನದ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಂಘಟನಾ ಸಮಿತಿ ಸಭೆಯಲ್ಲಿ ಎಡಿಎಂಪಿ ಅಖಿಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಏಡ್ಸ್ ಸಮಸ್ಯೆಯ ಕುರಿತು ಮತ್ತು ವಿಶ್ವ ಏಡ್ಸ್ ದಿನಾಚರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವರ್ಷದ ಏಡ್ಸ್ ದಿನದ ಸಂದೇಶ "ಬಿಕ್ಕಟ್ಟು ನಿವಾರಿಸುವುದು, ತಡೆಗಟ್ಟುವ ಚಟುವಟಿಕೆಗಳೊಂದಿಗೆ ಮುಂದುವರಿಯುವುದು". ಸಂದೇಶವನ್ನು ಆಧರಿಸಿ, ಜಿಲ್ಲೆಯ ವಿವಿಧ ಆರೋಗ್ಯ ಸೌಲಭ್ಯ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಿಸೆಂಬರ್ 1 ರಂದು ಬೆಳಿಗ್ಗೆ 9ಕ್ಕೆ ಕಾಞಂಗಾಡಿನ ಹಳೇ ಬಸ್ ನಿಲ್ದಾಣ ಸನಿಹದ ವ್ಯಾಪಾರಿ ಭವನದಿಂದ ಜಾಗೃತಿ ರ್ಯಾಲಿ ಆಯೋಜಿಸಲಾಗುವುದು. ಕಾಞಂಗಾಡ್ ಡಿವೈಎಸ್ಪಿ ಚಾಲನೆ ನೀಡುವರು. ವಿದ್ಯಾರ್ಥಿಗಳು ಸೇರಿದಂತೆ200ಕ್ಕೂ ಹೆಚ್ಚುಮಂದಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದ ಏಡ್ಸ್ ದಿನಾಚರಣೆಯ ಉದ್ಘಾಟನೆಗೆ ಸಂಬಂಧಿಸಿ ಜಾಗೃತಿ ವಿಚಾರ ಸಂಕಿರಣ ನಡೆಯಲಿದೆ.




