ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳಿಗೆ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳ ಆದಾಯ ಮತ್ತು ವೆಚ್ಚದ ಸಲ್ಲಿಕೆಯ ಕುರಿತು ತರಗತಿ ಆಯೋಜಿಸಲಾಯಿತು. ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ಮಾನದಂಡಗಳ ಪ್ರಕಾರ ಚುನಾವಣೆಯಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಮೊತ್ತದ ಲೆಕ್ಕಾಚಾರ ಯಾವ ರೀತಿ ಇರಿಸಿಕೊಳ್ಳಬೇಖು, ಮೊತ್ತದ ಮಿತಿ, ಸಾರ್ವತ್ರಿಕ ಚುನಾವಣೆಗಳ ಸಮಯದಲ್ಲಿ ನೇಮಿಸಲಾದ ಖರ್ಚು ವೀಕ್ಷಕರ ಕ್ರಮ, ಮೇಲ್ವಿಚಾರಣೆ ಮತ್ತು ಫಲಿತಾಂಶ ಘೋಷಣೆಯ ನಂತರ ಅಭ್ಯರ್ಥಿಗಳ ವೆಚ್ಚ ಲೆಕ್ಕಪತ್ರಗಳ ಸಲ್ಲಿಕೆ, ಅಧಿಕೃತ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳು, ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಲು ವಿಫಲರಾದವರನ್ನು ಅನರ್ಹಗೊಳಿಸುವಿಕೆ ಬಗ್ಗೆ ಜಿಪಂ ಅಭ್ಯರ್ಥಿಗಳು ಮತ್ತು ಅವರ ಏಜೆಂಟ್‍ಗಳಿಗೆ ತರಗತಿ ನಡೆಸಲಾಯಿತು
ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಚುನಾವಣೆಗಳಿಗೆ ಖರ್ಚು ಮಾಡುವ ಮೊತ್ತದ ಮೇಲೆನಿಗಾಯಿರಿಸುವುದು ಅತಿಯಾದ ಖರ್ಚನ್ನು ತಪ್ಪಿಸುವುದು ಅನಿವಾರ್ಯ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಚುನಾವಣಾ ಕಾನೂನು ಚುನಾವಣಾ ವೆಚ್ಚವನ್ನು ಮಿತಿಗೊಳಿಸುವ ನಿಬಂಧನೆಗಳನ್ನು ಒಳಗೊಂಡಿವೆ. ಈ ಕಾನೂನುಗಳ ಸುಗಮ ಅನುಷ್ಠಾನಕ್ಕಾಗಿ, ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಮತ್ತು ನಂತರದ ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳು, ಅವರ ಏಜೆಂಟರು, ಹಿತೈಷಿಗಳು ಅಥವಾ ರಾಜಕೀಯ ಪಕ್ಷಗಳು ಮಾಡಿದ ಚುನಾವಣಾ ವೆಚ್ಚ, ಮತ ಎಣಿಕೆಗೆ ಸಂಬಂಧಿಸಿದ ನಿಬಂಧನೆಗಳು, ಕೇರಳ ಪಂಚಾಯಿತಿ ರಾಜ್ (ಚುನಾವಣಾ ನಡವಳಿಕೆ)ಕಾನೂನು, 1995 ರ ನಿಯಮ 61 ಮತ್ತು ಕೇರಳ ನಗರಸಭೆ (ಚುನಾವಣಾ ನಡವಳಿಕೆ) ನಿಯಮಗಳು, 1995 ರ ನಿಯಮ 61 ರ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸುವ ಬಗ್ಗೆ ಮಾಹಿತಿ ನೀಡಲಾಯಿತು.
ಸ್ಥಳೀಯಾಡಳಿತ ಚುನಾವಣಾ ವೆಚ್ಚ ವೀಕ್ಷಕ ಕೆ. ವಿ. ಮುಕುಂದನ್ ತರಗತಿ ನಡೆಸಿದರು. ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಹಣಕಾಸು ಅಧಿಕಾರಿ ಮೊಹಮ್ಮದ್ ಸಮೀರ್, ಚುನಾವಣಾ ಕಿರಿಯ ಅಧೀಕ್ಷಕ ಎ. ರಾಜೀವನ್ ಉಪಸ್ಥಿತರಿದ್ದರು.
------------------------------





