ನಾಗರಿಕ ವಿಮಾನ ಯಾನ ಖಾತೆಯ ಸಹಾಯಕ ಸಚಿವ ಮುರಳೀಧರ ಮೊಹೋಲ್ ಲೋಕಸಭೆಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ''ಡಿಜಿಸಿಎ ಸುತ್ತೋಲೆ ಪ್ರಕಟಿಸಿದ ಬಳಿಕ ವರದಿಯಾದ (2023 ನವೆಂಬರ್‌ನಿಂದ 2025 ನವೆಂಬರ್)ಜಿಪಿಎಸ್ ಹಸ್ತಕ್ಷೇಪದ ಒಟ್ಟು ಪ್ರಕರಣಗಳು 1,951'' ಎಂದು ಹೇಳಿದ್ದಾರೆ.
ವಾಯು ಪ್ರದೇಶದಲ್ಲಿ ಜಿಎನ್‌ಎಸ್‌ಎಸ್‌ನ ಮೇಲೆ ಸೈಬರ್ ದಾಳಿಗೆ ಸಂಬಂಧಿಸಿ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) 2023 ನವೆಂಬರ್‌ನಲ್ಲಿ ಸಲಹಾ ಸುತ್ತೋಲೆ ಪ್ರಕಟಿಸಿದ ಬಳಿಕ ಜಿಪಿಎಸ್ ಮೇಲೆ ಸೈಬರ್ ದಾಳಿಯ ಬಗ್ಗೆ ವರದಿಯಾಗಲು ಆರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಜಿಪಿಎಸ್‌ನ ಮೇಲೆ ದಾಳಿ ನಡೆಸಿದ ಘಟನೆಗಳು ದಿಲ್ಲಿ, ಮುಂಬೈ, ಕೋಲ್ಕತಾ, ಅಮೃತಸರ, ಹೈದರಾಬಾದ್, ಬೆಂಗಳೂರು ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ವರದಿಯಾಗಿವೆ.

