ಒಟ್ಟು 17,50,863 ಅರ್ಜಿಗಳ ಪೈಕಿ 67,615 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು 14,30,031 ಅರ್ಜಿಗಳಿಗೆ ಉತ್ತರಿಸಲಾಗಿದೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
2022-23ರ ಅವಧಿಯಲ್ಲಿ, 16,38,784 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆ ಪೈಕಿ, 52,662 ಅರ್ಜಿಗಳನ್ನು ತಿರಸ್ಕರಿಸಲಾಯಿತು ಮತ್ತು 13,15,222 ಅರ್ಜಿಗಳಿಗೆ ಉತ್ತರಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಬಳಕೆದಾರರನ್ನು ಖಚಿತಪಡಿಸಲು ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸಲು ಜನವರಿ 2ರಂದು ಆರ್‌ಟಿಐ ಆನ್‌ಲೈನ್ ವೆಬ್‌ಸೈಟ್‌ನಲ್ಲಿ 'ಒಂದು ಬಾರಿಯ ಪಾಸ್‌ವರ್ಡ್' (ಒಟಿಪಿ) ವ್ಯವಸ್ಥೆಗೆ ಚಾಲನೆ ನೀಡಲಾಯಿತು ಎಂದು ಪ್ರತ್ಯೇಕ ಉತ್ತರದಲ್ಲಿ ಸಚಿವರು ತಿಳಿಸಿದರು.




