ಕಾಸರಗೋಡು: ಮಧೂರು ಗ್ರಾಮ ಪಂಚಾಯತಿ ಬಿಜೆಪಿಯ ಸ್ವಂತ ಪಂಚಾಯತಿ ಎಂದು ಮತ್ತೆ ದೃಢಪಡಿಸಿದೆ. ಈ ಬಾರಿಯೂ ಎನ್‍ಡಿಎ ಭಾರಿ ಬಹುಮತದೊಂದಿಗೆ ಮಧೂರು ಪಂಚಾಯತಿಯಲ್ಲಿ ಅಧಿಕಾರವನ್ನು ಪಡೆದುಕೊಂಡಿದೆ. 1979 ರಲ್ಲಿ ರಚನೆಯಾದಾಗಿನಿಂದ ಈ ಪಂಚಾಯತ್ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಚುನಾವಣೆಯಲ್ಲಿ, ಬಿಜೆಪಿ 24 ವಾರ್ಡ್‍ಗಳಲ್ಲಿ 15 ವಾರ್ಡ್‍ಗಳನ್ನು ಪಡೆದುಕೊಂಡಿತು. ಯುಡಿಎಫ್ 9 ವಾರ್ಡ್‍ಗಳನ್ನು ಗೆದ್ದಿದೆ. ನಾಲ್ಕು ಸ್ಥಾನಗಳನ್ನು ಹೊಂದಿದ್ದ ಎಲ್‍ಡಿಎಫ್ ಒಂದೇ ಒಂದು ಸ್ಥಾನವನ್ನು ಗೆಲ್ಲದೆ ಪಂಚಾಯತಿಯಿಂದ ನಿರ್ಗಮಿಸಿದೆ.
46 ವರ್ಷಗಳಿಂದ ನಿರಂತರವಾಗಿ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ಬೇರೆ ಯಾವುದೇ ಪಂಚಾಯತ್ ರಾಜ್ಯದಲ್ಲಿ ಇಲ್ಲ. ಮಧೂರು ಗ್ರಾಮ ಪಂಚಾಯಿತಿಯು ಕಾಸರಗೋಡು ಬ್ಲಾಕ್‍ನಲ್ಲಿರುವ ಮಧೂರು, ಪಟ್ಲ, ಶಿರಿಬಾಗಿಲು ಮತ್ತು ಕೂಡ್ಲು ಗ್ರಾಮಗಳನ್ನು ಒಳಗೊಂಡಿದೆ. 2020 ರಲ್ಲಿ, 20 ಸ್ಥಾನಗಳಲ್ಲಿ ಬಿಜೆಪಿ 13 ಸ್ಥಾನಗಳನ್ನು ಹೊಂದಿತ್ತು. ಎಲ್‍ಡಿಎಫ್ ನಾಲ್ಕು ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಮೂರು ಸ್ಥಾನಗಳನ್ನು ಹೊಂದಿತ್ತು. ಮೂರು ಸ್ಥಾನಗಳನ್ನು ಹೊಂದಿದ್ದ ಯುಡಿಎಫ್ ಒಂಬತ್ತಕ್ಕೆ ಮುನ್ನಡೆದರೆ, ಎಲ್‍ಡಿಎಫ್ ಶೂನ್ಯಕ್ಕೆ ಕುಸಿದಿದೆ.
ಬಿಜೆಪಿಯೊಳಗಿನ ಆಂತರಿಕ ಕಲಹವನ್ನು ಮತ ಗಳಿಕೆಗೆ ಬಳಸಬಹುದು ಎಂದು ಎಲ್‍ಡಿಎಫ್ ಮತ್ತು ಯುಡಿಎಫ್ ಭಾವಿಸಿದ್ದರೂ, ಬಿಜೆಪಿ ಹೆಚ್ಚಿನ ಬಲದೊಂದಿಗೆ ಅಧಿಕಾರಕ್ಕೆ ಬಂದಿರುವುಉದ ಅಚ್ಚರಿ ಮೂಡಿಸಿದೆ. ಜಿಲ್ಲೆಯಲ್ಲಿ ಎನ್‍ಡಿಎ ಹಲವು ಸ್ಥಳಗಳಲ್ಲಿ ಪ್ರಬಲಗೊಂಡ ಸೂಚನೆ ಇದೆ. ಅನೇಕ ಪಂಚಾಯತ್‍ಗಳಲ್ಲಿ ಅಧಿಕಾರವನ್ನು ಪಡೆಯಲು ಮತ್ತು ತನ್ನ ಸ್ಥಾನಮಾನವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗಿದೆ. ರಾಜ್ಯದ ಗಡಿ ಜಿಲ್ಲೆಯಾದ ಕಾಸರಗೋಡು, ಬಿಜೆಪಿ ಬಲವಾದ ಬೇರುಗಳನ್ನು ಹೊಂದಿರುವ ಸ್ಥಳವಾಗಿದೆ.

