ಕಾಸರಗೋಡು: ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಕಾಸರಗೋಡಿನಲ್ಲಿ ನಡೆಯುತ್ತಿರುವ 60 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೆÇೀತ್ಸವನ್ನು ಮಂದಿರದ ಗುರುಸ್ವಾಮಿ ಶ್ರೀ ಬಾಲಕೃಷ್ಣ ಸ್ವಾಮಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸುರೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧನಂಜಯ, ಮಹೇಶ ನೆಲ್ಲಿಕುಂಜೆ, ಕೋಶಾಧಿಕಾರಿ ಲವ ಮೀಪುಗುರಿ, ಕರುಣಾಕರ ಗುರುಸ್ವಾಮಿ, ಭವಾನಿಶಂಕರ ಗುರುಸ್ವಾಮಿ, ಮನೀಶ್ ಕೋಟಿ, ಜಿತಿನ್ ರಾಜ್ ಎಸ್.ವಿ.ಟ, ಕಿರಣ್ ಸೂರ್ಲು, ಅಜಿತ್ ಸೂರ್ಲು ಹಾಗೂ ಅಯ್ಯಪ್ಪ ವೃತಧಾರಿಗಳು ಉಪಸ್ಥಿತರಿದ್ದರು.


