ಕಾಸರಗೋಡು: ಕಂದಾಯ ಜಿಲ್ಲಾ 64ನೇ ಶಾಲಾ ಕಲೋತ್ಸವ ಮೊಗ್ರಾಲ್‍ಪುತ್ತೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು. ವೇದಿಕೇತರ ಸ್ಪರ್ಧೆಗಳು ಮೂರು ದಇವಸಗಳ ಕಾಲ ನಡೆಯಲಿದ್ದು, ಕಾಸರಗೋಡು ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್ ವೇದಿಕೆಯೇತರ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಧ್ವಜಾರೋಹಣದೊಂದಿಗೆ ಪ್ರಾರಂಭವಾದವು.
ಪ್ರಾಂಶುಪಾಲರಾದ ಬಿನಿ ವಿ.ಎಸ್., ಮುಖ್ಯ ಶಿಕ್ಷಕ ಜಯರಾಮ್, ಹಿರಿಯ ಸಹಾಯಕ ಝಾನ್ಸಿ ಟೀಚರ್, ಪಿಟಿಎ ಅಧ್ಯಕ್ಷ ಲತೀಫ್ ಕೊಪ್ಪಲಂ, ಉಪಾಧ್ಯಕ್ಷ ರಿಯಾಜ್ ಕರೀಮ್, ಪಿ.ಟಿ. ಬೆನ್ನಿ ಎಂ.ಕೆ.ಆಸಿಫ್, ವಿಷ್ಣು ಪಾಲ, ಸಿರಾಜುದ್ದೀನ್ ಎಸ್.ಎಂ, ಅಬ್ಬಾಸ್ ನಡುಪಾಲಂ, ಕಲ್ಲಂಬಳಂ ನಜೀಬ್, ಮಾಹಿನ್ ಮಾಸ್ಟರ್, ಸುಕುಮಾರನ್ ಮಾಸ್ಟರ್, ಗೋಪಾಲಕೃಷ್ಣನ್, ಬಿಜು ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ಶಾಲೆಯ ಎಂಟು ಪ್ರತ್ಯೇಕ ಕೇಂದ್ರಗಳಲ್ಲಿ 45 ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಮೊದಲ ದಿನ 355 ಸ್ಪರ್ಧಾಳುಗಳು ಭಾಗವಹಿಸಿದ್ದರು. ವೇದಿಕೆ ಸ್ಪರ್ಧೆಗಳು ಸೇರಿದಂತೆ ಸಾಂಸ್ಕøತಿಕ ಕಲೋತ್ಸವ ಡಿ. 29, 30 ಹಾಗೂ 31 ರಂದು ಶಾಲಾ ವೇದಿಕೆಗಳಲ್ಲಿ ಜರಗಲಿದೆ.





