ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಿಯ ಹೊಳೆಯಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಐದು ದೋಣಿಗಳು ಮತ್ತು 2 ಟಿಪ್ಪರ್ ಲಾರಿಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಮರಳು ತುಂಬಿಡಲಾಗಿದ್ದ ನೂರಾರು ಚೀಲಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಕುಂಬಳ ಕರಾವಳಿ ಪ್ರದೇಶ, ಮೊಗ್ರಾಲ್, ಶಿರಿಯಾ ಮತ್ತು ಕುಕ್ಕಾರ್ ನದಿಗಳ ಅಳಿವೆ ಮತ್ತು ಕರಾವಳಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬೃಹತ್ ಮರಳು ಮಾಫಿಯಾ ಗ್ಯಾಂಗ್‍ಗೆ ಸೇರಿದ ದೋಣಿ ಮತ್ತು ಟಿಪ್ಪರ್ ಇದಾಗಿದ್ದು, ವಶಪಡಿಸಿಕೊಂಡಿರುವ ಫೈಬರ್ ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ಅನಧಿಕೃತವಾಗಿ ಮರಳು ಸಂಗ್ರಹಿಸುತ್ತಿದ್ದ ಒಟ್ಟು 18ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳ ಸಾಗರ ಮಂಡಳಿಯ ವ್ಯಾಪ್ತಿಯಲ್ಲಿರುವ ಅಳಿವೆ ಪ್ರದೇಶದಿಂದ ಮರಳನ್ನು ಸಾಗಿಸುವುದು, ಸರ್ಕಾರಿ ಸೊತ್ತು ಲೂಟಿಯಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ವಯ ದಾಳಿನಡೆಸಲಾಗಿದೆ. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಮುಕುಂದನ್ ಟಿ.ಕೆ ನೇತೃತ್ವದಲ್ಲಿ ಎಸ್‍ಐ ಅನಂತ ಕೃಷ್ಣನ್ ಮತ್ತು ಎಸ್‍ಐ ಶ್ರೀಜೇಶ್ ಕಾರ್ಯಾಚರಣೆ ನಡೆಸಿದ್ದಾರೆ.





