ಮಂಜೇಶ್ವರ : ಮಂಗಳೂರಿಂದ ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 67.5ಲಕ್ಷ ರೂ. ನಗದನ್ನು ಮಂಜೇಶ್ವರ ಅಬಕಾರಿ ದಳ ಅಧಿಕಾರಿಗಳು ವಶಪಡಿಸಿಕೊಂಡು, ಒಬ್ಬನನ್ನುಬಂಧಿಸಿದ್ದಾರೆ. ತಳಿಪರಂಬ ಚೇಲೇರಿಮುಕ್ಕ್ ನಿವಾಸಿ ಸಮೀರ್ (41)ಬಂಧಿತ.
ಮಂಜೇಶ್ವರ ವಾಮಂಜೂರು ಚೆಕ್ ಪೆÇೀಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಬಸ್ ತಡೆದು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ಹಣ ಪತ್ತೆಹಚ್ಚಿದ್ದರು.
ಅಬಕಾರಿ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ನಗದು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳಲ್ಲಿ ಆರೋಪಿಯು ಕೇಸು ದಾಖಲಿಸದಂತೆ 10ಲಕ್ಷ ರೂ. ಲಂಚ ನೀಡಲು ಮುಂದೆಬಂದಿದ್ದನೆನ್ನಲಾಗಿದೆ. ಹೊಸಬೆಟ್ಟು ಯೂನಿಯನ್ ಬೇಂಕಿನಲ್ಲಿ ಹಣವನ್ನು ಎಣಿಸಿ, ಬಳಿಕ ಮಂಜೇಶ್ವರ ಪೆÇೀಲೀಸರಿಗೆ ಹಸ್ತಾಂತರಿಸಲಾಯಿತು. ಸ್ಥಳೀಯಾಡಳಿತ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.




