HEALTH TIPS

ಮತದಾನ ಸಾಮಗ್ರಿ ವಿತರಣೆ, ಮತ ಎಣಿಕೆ ಕೇಂದ್ರಗಳ ಮಂಜೂರು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಸಾಮಗ್ರಿ ವಿತರಣೆ ಮತ್ತು ಮತ ಎಣಿಕೆ ಕೇಂದ್ರಗಳನ್ನು ಗುರುತಿಸಲಾಗಿದೆ.  ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧೀನದಲ್ಲಿ ಬರುವ ಗ್ರಾಮ ಪಂಚಾಯಿತಿಗಳಾದ ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡ್, ಚೆಂಗಳ, ಬದಿಯಡ್ಕ  ಗ್ರಾಮ ಪಂಚಾಯಿತಿಗಳ  ಕಾಸರಗೋಡು ಸರ್ಕಾರಿ ಕಾಲೇಜಿನ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿರುವ ಮುಖ್ಯ ಕಟ್ಟಡದ ನೆಲ ಮಹಡಿ ಮತ್ತು ಇತರ ಪೂರಕ ಕಟ್ಟಡಗಳನ್ನು ಮಂಜೂರುಗೊಳಿಸಲಾಗಿದೆ. 

ಕಾಞಂಗಾಡು ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ಅಜನೂರು, ಮಡಿಕೈ, ಪಳ್ಳಿಕ್ಕರ, ಪುಲ್ಲೂರು ಪೆರಿಯ, ಉದುಮ ಮತ್ತು ಕಾರಡ್ಕ ಬ್ಲಾಕ್ ವ್ಯಾಪ್ತಿಯ ಕುಂಬ್ಡಾಜೆ,  ಬೆಳ್ಳೂರು, ದೇಲಂಪಾಡಿ, ಕಾರಡ್ಕ, ಮುಳಿಯಾರ್, ಕುತ್ತಿಕೋಲ್, ಬೇಡಡ್ಕ ಪಂಚಾಯಿತಿಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಮತ್ತು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯನ್ನು ಮಂಜೂರುಗೊಳಿಸಲಾಗಿದೆ.

ಮಂಜೇಶ್ವರಂ ಬ್ಲಾಕ್ ವ್ಯಾಪ್ತಿಯ ಮಂಗಲ್ಪಾಡಿ, ವರ್ಕಾಡಿ, ಪುತ್ತಿಗೆ, ಮೀಂಜ, ಮಂಜೇಶ್ವರಂ, ಪೈವಳಿಕೆ, ಎನ್ಮಕಜೆ ಗ್ರಾಮ ಪಂಚಾಯಿತಿಗಳಿಗೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ,  ನೀಲೇಶ್ವg  ಬ್ಲಾಕ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ಕಯ್ಯೂರು ಚೀಮೇನಿ, ಪಿಲಿಕೋಡ್,ಚೆರುವತ್ತೂರು, ತ್ರಿಕರಿಪುರ, ಪಡನ್ನ, ವಲಿಯಪರಂಬ ಗ್ರಾಪಂಗಳಿಗೆ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು, ಪರಪ್ಪ ಬ್ಲಾಕ್ ವ್ಯಾಪ್ತಿಯ ಕೋಡೋಂ ಬೇಲೂರು, ಕಳ್ಳಾರ್, ಪನತ್ತಡಿ, ಬಲಾಲ್, ಕಿನಾನೂರ್‍ಕರಿಂದಳಂ, ಈಸ್ಟ್ ಎಳೇರಿ, ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿಗಳಿಗೆ ಪರಪ್ಪ ಸರ್ಕಾರಿ ಹೈಯರ್ ಸೆಕೆಂಡರಿಶಾಲೆಯನ್ನು ಮತದಾನ ಸಾಮಗ್ರಿ ವಿತರಣೆ ಹಾಗೂ ಮತ ಎಣಿಕೆ ಕೇಂದ್ರವಾಗಿ ಗುರುತಿಸಲಾಗಿದೆ.

ಕಾಞಂಗಾಡ್  ನಗರಸಭೆಗೆ  ಹೊಸದುರ್ಗದ ಜಿಎಚ್‍ಎಸ್‍ಎಸ್, ನೀಲೇಶ್ವರಂ ನಗರಸಭೆಗೆ ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಸರಗೋಡು ನಗರಸಭೆಯ ಕಾಸರಗೋಡು ಸರ್ಕಾರಿ ಕಾಲೇಜನ್ನು ಮತದಾನ ಸಾಮಗ್ರಿ ವಿತರಣೆ ಹಾಗೂ ಮತ ಎಣಿಕೆ ಕೇಂದ್ರವಾಗಿ ಗುರುತಿಸಲಾಗಿದೆ.

ಸ್ಟ್ರಾಂಗ್ ರೂಮ್‍ಗೆ ಚುನಾವಣಾ ಸಾಮಗ್ರಿ:

ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಗೋದಾಮನ್ನು ತೆರೆದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳು ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಸ್ಟ್ರಾಂಗ್ ರೂಂಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ.  ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ, ಬಿಗಿ ಪೊಲೀಸ್ ಬಂದೋಬಸ್ತ್‍ನೊಂದಿಗೆ ಗೋದಾಮನ್ನು ತೆರೆಯಲಾಯಿತು. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಗೋಪಕುಮಾರ್ ಇವಿಎಂ ನೋಡಲ್ ಅಧಿಕಾರಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್ ಲಾರೆನ್ಸ್, ಚುನಾವಣಾ ಕಿರಿಯ ಅಧೀಕ್ಷಕ ರಾಜೀವ್, ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳ ಉಪ ನಿರ್ದೇಶಕ ಕೆ ವಿ ಹರಿದಾಸ್, ಚುನಾವಣಾ ನೋಂದಣಿ ಅಧಿಕಾರಿಗಳು ಪಂಚಾಯತ್ ಬ್ಲಾಕ್ ಪುರಸಭೆ ಕಾರ್ಯದರ್ಶಿಗಳು ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು  ಉಪಸ್ಥಿತರಿದ್ದರು.   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries